Home » Good News | ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ,‘ ಇಂತಿಷ್ಟೇ ‘ ಕಡಿತ ಮಾಡಬೇಕೆಂದು ಎಣ್ಣೆ ಕಂಪನಿಗಳಿಗೆ ತಾಕೀತು ಮಾಡಿದ ಕೇಂದ್ರ !

Good News | ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ,
‘ ಇಂತಿಷ್ಟೇ ‘ ಕಡಿತ ಮಾಡಬೇಕೆಂದು ಎಣ್ಣೆ ಕಂಪನಿಗಳಿಗೆ ತಾಕೀತು ಮಾಡಿದ ಕೇಂದ್ರ !

0 comments

ನವದೆಹಲಿ : ಇದು ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್. ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಲಾಗ್ತಿದ್ದು, ಪ್ರತಿ ಲೀಟರ್ ಎಣ್ಣೆಗೆ ತಕ್ಷಣವೇ 15 ರೂಪಾಯಿ ಕಡಿತಗೊಳಿಸುವಂತೆ ಅಡುಗೆ ಎಣ್ಣೆ ತಯಾರಿಕಾ ಕಂಪನಿಗಳಿಗೆ ನಿರ್ದೇಶನ ನೀಡಿದೆ.

ಖಾದ್ಯ ತೈಲ ಸಂಘಗಳಿಗೆ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ಲೀಟರ್‌ಗೆ ರೂ.15 ರಷ್ಟು ಕಡಿಮೆ ಮಾಡಲು ಸೂಚಿಸಲಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಖಾದ್ಯ ತೈಲ ಕಂಪನಿಗಳೊಂದಿಗೆ ಜುಲೈ 6 ರಂದು ನಡೆಸಿದ ಸಭೆಯಲ್ಲಿಅಡುಗೆ ಎಣ್ಣೆಯ ಬೆಲೆಯನ್ನ ಕಡಿಮೆ ಮಾಡಲು ಕೋರಲಾಗಿತ್ತು ಎಂದು ತಿಳಿದು ಬಂದಿದೆ. ಅದ್ರಂತೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ತಕ್ಷಣವೇ ಬೆಲೆಗಳನ್ನ ಕಡಿಮೆ ಮಾಡಬೇಕು ಎಂದು ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಇದರ ಲಾಭವನ್ನ ಗ್ರಾಹಕರು ಮತ್ತು ಸಂಸ್ಕರಣಾಗಾರರಿಗೆ ವರ್ಗಾಯಿಸಲು ಅಡುಗೆ ಎಣ್ಣೆಯ ಬೆಲೆಯನ್ನು ತಕ್ಷಣವೇ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ. ಇನ್ನು ವಿತರಕರಿಗೆ ಬೆಲೆಗಳನ್ನ ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಪ್ರಯೋಜನಗಳನ್ನ ಒದಗಿಸಲು ತಯಾರಕರು ಮತ್ತು ತೈಲ ಸಂಸ್ಕರಣಾಗಾರಗಳಿಗೆ ಕೇಂದ್ರ ಸರ್ಕಾರವು ನಿರ್ದೇಶನಗಳನ್ನ ನೀಡಿದೆ.

You may also like

Leave a Comment