Home » ಶಾಲಾ ಬಾಲಕನನ್ನು ತರಗತಿಯಲ್ಲೇ ಬಿಟ್ಟು ಬೀಗ ಹಾಕಿ ಮನೆಗೆ ತೆರಳಿದ ಶಿಕ್ಷಕರು!

ಶಾಲಾ ಬಾಲಕನನ್ನು ತರಗತಿಯಲ್ಲೇ ಬಿಟ್ಟು ಬೀಗ ಹಾಕಿ ಮನೆಗೆ ತೆರಳಿದ ಶಿಕ್ಷಕರು!

0 comments

ಇತ್ತೀಚೆಗೆ ಶಾಲಾ ಸಿಬ್ಬಂದಿಗಳ ನಿರ್ಲಕ್ಷ, ಅದೆಷ್ಟೋ ಮಕ್ಕಳ ಪ್ರಾಣವನ್ನೇ ಹಿಂಡಿದೆ. ಮಕ್ಕಳನ್ನು ಜೋಪಾನವಾಗಿ ನೋಡಿಕೊಂಡು ಮತ್ತೆ ಮನೆಗೆ ಕಳುಹಿಸಬೇಕಾದ ಶಿಕ್ಷಕರು, ಮಕ್ಕಳನ್ನು ಗಮನಿಸದೇ ಇರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ.

ಇದೀಗ ಇಂತಹುದೇ ಒಂದು ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಲ್ಲೆಯಲ್ಲಿ ನಡೆದಿದ್ದು, ಐದು ವರ್ಷದ ಶಾಲಾ ಬಾಲಕನನ್ನು ತರಗತಿಯಲ್ಲೇ ಬಿಟ್ಟು ಬಾಗಿಲು ಹಾಕಿ ಶಿಕ್ಷಕರು ಮನೆಗೆ ತೆರಳಿದ ಆಘಾತಕಾರಿ ಘಟನೆ ವರದಿಯಾಗಿದೆ.

ಆದಿತ್ಯ ಎಂಬ ಹೆಸರಿನ ಬಾಲಕ ಇನ್ನೂ ಮನೆಗೆ ಮರಳದ ಕಾರಣ, ಆತನ ಪೋಷಕರು ಶಾಲೆಗೆ ತೆರಳಿ ನೋಡಿದಾಗ ತರಗತಿಯಲ್ಲಿ ಉಳಿದಿದ್ದ ಘಟನೆ ಬೆಳಕಿಗೆ ಬಂದಿದೆ. ತನ್ನ ರಕ್ಷಣೆಗಾಗಿ ಮಗುವು ತರಗತಿಯೊಳಗೆ ಅಳುತ್ತಿದ್ದುದನ್ನು ಗಮನಿಸಿದ ಪೋಷಕರು, ಕೊಠಡಿಯ ಬಾಗಿಲು ಒಡೆಯುವ ಮೂಲಕ ರಕ್ಷಣೆ ಮಾಡಿದ್ದಾರೆ.

ಮಗು ತರಗತಿಯೊಳಗೆ ಮಲಗಿದ್ದು, ಇದನ್ನು ಗಮನಿಸದ ಶಾಲಾ ಸಿಬ್ಬಂದಿ ಕೊಠಡಿಗೆ ಬಾಗಿಲು ಹಾಕಿ ಮನೆಗೆ ತೆರಳುವ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಶಾಲಾ ಸಿಬ್ಬಂದಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

You may also like

Leave a Comment