Home » ದುರ್ಗಾದೇವಿ ಅವತಾರದಲ್ಲಿ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ, ಕಾರಣ?

ದುರ್ಗಾದೇವಿ ಅವತಾರದಲ್ಲಿ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ, ಕಾರಣ?

0 comments

ನಮ್ಮ ಸಮಾಜದಲ್ಲಿ ಎಂತೆಂತಹ ಘಟನೆಗಳು ನಡೆಯುತ್ತದೆ ಎಂದರೆ, ಇಂತಹ ಜನರು ಕೂಡ ಇದ್ದಾರಾ ಎಂದು ಪ್ರಶ್ನೆ ಮಾಡುವ ಮಟ್ಟಿಗೆ. ಹೌದು. ದಿನದಿಂದ ದಿನಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರ-ವಿಚಿತ್ರವಾದ ಘಟನೆಗಳು ವೈರಲ್ ಆಗುತ್ತಲೇ ಇದ್ದು, ಇದೀಗ ಬಿಹಾರದಲ್ಲಿ ನಡೆದಂತಹ ಒಂದು ಘಟನೆ ಎಲ್ಲೆಡೆ ಹರಿದಾಡುತ್ತಿದೆ.

ಮಹಿಳೆಯೊಬ್ಬಳು ತನ್ನ ಪತಿಯನ್ನು ಜೈಲಿನಿಂದ ಬಿಡಿಸಲು ದುರ್ಗಾಮಾತೆಯಾದ ಕಥೆ ಇದು. ಸಂಜು ದೇವಿಯ ಗಂಡ ಕುಡುಕನಾಗಿದ್ದು, ಆತನನ್ನು ಪೊಲೀಸರು ಜೈಲಿನಲ್ಲಿ ಬಂಧಿಸಿದ್ದರು. ಹೀಗಾಗಿ ತನ್ನ ಗಂಡನನ್ನು ಪೋಲಿಸರಿಂದ ರಕ್ಷಿಸಲು ಪತ್ನಿ, ತನ್ನ ಮೈ ಮೇಲೆ ದೇವಿ ಬಂದಂತಹ ನಾಟಕವನ್ನು ಆಡಿದ್ದಾಳೆ.

ಪೋಲಿಸ್ ಸ್ಟೇಷನ್ ಗೆ ತೆರಳಿ, ಒಂದು ಕೈಯಲ್ಲಿ ಲಾಠಿ, ಇನ್ನೊಂದು ಕೈ ಯಲ್ಲಿ ಅಕ್ಕಿ ಹಿಡಿದ ಸಂಜುದೇವಿ ‘ನಾನು ದೇವಿ ಭಕ್ತೆ. ನನ್ನ ಮೇಲೆ ದೇವಿ ಆವಾಹನೆಯಾಗಿದ್ದಾಳೆ. ನಾನೇ ದೇವಿಯ ಅವತಾರ, ನಾನೇ ದುರ್ಗಾ ಮಾತೆ. ನನ್ನ ಪತಿಯನ್ನು ಬಿಡಿಸಿಕೊಂಡು ಹೋಗಲು ಬಂದಿರುವೆ’ ಎಂದು ದೊಡ್ಡ ಹೈಡ್ರಾಮವನ್ನೇ ನಡೆಸಿದ್ದಾಳೆ.

ಅಷ್ಟೇ ಅಲ್ಲದೆ, ಪೊಲೀಸರ ಮೇಲೆ ಮಾಟ ಮಂತ್ರ ಮಾಡುತ್ತ ಅವರ ಮೇಲೆ ಅಕ್ಕಿ ಕಾಳುಗಳನ್ನು ಚೆಲ್ಲುತ್ತ, ನಾನೇ ದೇವಿ ಎಂದು ಮಂತ್ರವನ್ನು ಹೇಳಲು ತೊಡಗಿದಳು. ಅಲ್ಲದೇ, ನನ್ನ ಆದೇಶವಿಲ್ಲದೆ ಏನು ನಡೆಯಲ್ಲ ಎಂದಳು.

ಆದರೆ ಇವಳ ದೇವಿಯ ನಾಟಕದಿಂದ ರೋಸಿ ಹೋದ ಪೊಲೀಸ್ ಅಧಿಕಾರಿ ಜಿತೇಂದ್ರ ದೇವ್ ದೀಪ್, ಇನ್ನು ಇದೇ ರೀತಿ ಡ್ರಾಮಾ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿ ಅವಳನ್ನು ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ.

You may also like

Leave a Comment