Home » ಬೈತಡ್ಕ : ಹೊಳೆಯಲ್ಲಿ ಕಣ್ಮರೆಯಾದ ಯುವಕರು | ನಾಪತ್ತೆ ದೂರು ದಾಖಲಿಸಿದ ಪೋಷಕರು

ಬೈತಡ್ಕ : ಹೊಳೆಯಲ್ಲಿ ಕಣ್ಮರೆಯಾದ ಯುವಕರು | ನಾಪತ್ತೆ ದೂರು ದಾಖಲಿಸಿದ ಪೋಷಕರು

by Praveen Chennavara
0 comments

ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಮಸೀದಿಯ ಸಮೀಪವೇ ಸೇತುವೆಗೆ ಡಿಕ್ಕಿ ಹೊಡೆದು ಕಾರು ಹೊಳೆಗೆ ಬಿದ್ದು ಇಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ ದಾಖಲಾಗಿದೆ.

ವಿಟ್ಲದ ಶಾಂತಿಯಡ್ಕ ನಿವಾಸಿ ಧನುಷ್ (25) ನಾಪತ್ತೆಯಾದ ಕುರಿತು ಧನುಷ್ ಅವರ ತಂದೆ ಚೋಮ ನಾಯ್ಕ ಅವರು ವಿಟ್ಲ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ ಬೆನ್ನಲ್ಲೇ ಕನ್ಯಾನ ಕೋನಾಲೆ ನಿವಾಸಿ ಧನಂಜಯ (26) ನಾಪತ್ತೆಯಾದ ಬಗ್ಗೆ ಅವರ ಸಹೋದರ ದೂರು ನೀಡಿದ್ದಾರೆ.

ಧನುಷ್ ಮತ್ತು ಧನಂಜಯ ಜು.9ರಂದು ರಾತ್ರಿ 8 ಗಂಟೆಗೆ ಶಾಂತಿಯಡ್ಕದ ಮನೆಯಲ್ಲಿ ಊಟ ಮಾಡಿ, ಮನೆಯಿಂದ ತನ್ನ ಮಾರುತಿ ಕಾರಿನಲ್ಲಿ ವಿಟ್ಲ ಕಡಂಬು ಕಡೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಇಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದಾಗ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ನಾಪತ್ತೆಯಾದ ಅವರನ್ನು ಪತ್ತೆ ಮಾಡಿ ಕೊಡುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

You may also like

Leave a Comment