Home » ಮುಸ್ಲಿಂ ಯುವಕನ ದೇಹದಲ್ಲಿ ಮಿಡಿದ ಹಿಂದೂ ಯುವತಿಯ ಹೃದಯ!!!

ಮುಸ್ಲಿಂ ಯುವಕನ ದೇಹದಲ್ಲಿ ಮಿಡಿದ ಹಿಂದೂ ಯುವತಿಯ ಹೃದಯ!!!

by Mallika
0 comments

ಮುಸ್ಲಿಂ ಯುವಕನೋರ್ವನಿಗೆ ಹಿಂದೂ ಯುವತಿಯ ಹೃದಯ ಕಸಿ ಮಾಡಿಸಿದ ಘಟನೆಯೊಂದು ರಾಜ್ಯದಲ್ಲಿ ನಡೆದಿದೆ. ಈ ಸಂದರ್ಭ ಭಾವೈಕ್ಯತೆಯ ಸಂಗಮ ಎಂದೇ ಹೇಳಬಹುದು. ಒಂದು ಜೀವದ ರಕ್ಷಣೆ ಎಲ್ಲದಕ್ಕಿಂತ ಮಿಗಿಲು ಎಂದು ನಂಬಿದ ಆ ಯುವತಿಯ ಕುಟುಂಬದ ಈ ನಡೆ ಶ್ಲಾಘನೀಯ. ದುಃಖದ ನಡುವೆಯೂ ಸಂತೋಷದ ಕೆಲಸವೊಂದು ಬೆಳಗಾವಿಯ ಕೆಎಲ್ ಇ ಆಸ್ಪತ್ರೆಯಲ್ಲಿ ನಡೆದಿದೆ.

ಮೆದುಳು ನಿಷ್ಕ್ರಿಯವಾದ ಹಿಂದೂ ಬಾಲಕಿಯ ಹೃದಯವನ್ನು ಮುಸ್ಲಿಂ ಯುವಕನಿಗೆ ಕಸಿ ಮಾಡಿದ ಘಟನೆ, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ನಡೆದಿದೆ.

ಉತ್ತರ ಕನ್ನಡ ಮೂಲದ 15 ವರ್ಷದ ಬಾಲಕಿ ಅಪಘಾತದಲ್ಲಿ ಗಾಯಗೊಂಡಿದ್ದು, ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಈ ವೇಳೆಯಲ್ಲಿ ಯುವತಿಗೆ ಚಿಕಿತ್ಸೆ ಫಲಕಾರಿಯಾಗದೇ ಮಿದುಳು ನಿಷ್ಕ್ರಿಯವಾಗಿತ್ತು.

ಇದೇ ವೇಳೆ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಮುಸ್ಲಿಂ ಯುವಕನೊಬ್ಬ ಹೃದ್ರೋಗದಿಂದ ಬಳಲುತ್ತಿದ್ದ. ಬಾಲಕಿಯ ಪೋಷಕರ ಸಮ್ಮತಿ ಮೇರೆಗೆ ಹೃದಯ ಕಸಿ ಮಾಡಲು ಒಪ್ಪಿಗೆ ನೀಡಿದ್ದರು. ಜೀರೋ ಟ್ರಾಫಿಕ್‌ನಲ್ಲಿ ಎರಡು ಪೊಲೀಸ್ ಬೆಂಗಾವಲು ವಾಹನದ ಸಹಾಯದಿಂದ ಕೆಎಲ್‌ಇ ಆಸ್ಪತ್ರೆಗೆ ಬಾಲಕಿಯ ಹೃದಯ 50 ನಿಮಿಷಗಳಲ್ಲಿ ಧಾರವಾಡದಿಂದ ಬೆಳಗಾವಿಗೆ ತಲುಪಿಸಲಾಗಿತ್ತು.

ಹಿಂದೂ ಮಸ್ಲಿಂ ಬಾಂಧವ್ಯದ ಈ ಕೆಲಸಕ್ಕೆ ಎಲ್ಲರೂ ಶ್ಲಾಘಿಸಬೇಕು. ಧರ್ಮ ಧರ್ಮದ ಗಲಾಟೆಯ ಮಧ್ಯೆ ಎಲ್ಲೋ ಒಂದು ಕಡೆ ನಡೆಯುವ ಇಂಥಹ ಸಮಾಜೋಪಕಾರ ಕೆಲಸ ಯುವ ಮನಸ್ಸಲ್ಲಿ ಬೇರೂರಲಿ.

You may also like

Leave a Comment