Home » ಪೈಶಾಚಿಕ ಕೃತ್ಯ : ಮಗನಿಂದಲೇ ಜನ್ಮಕೊಟ್ಟ ತಾಯಿಯ ಮೇಲೆ ಅತ್ಯಾಚಾರ!

ಪೈಶಾಚಿಕ ಕೃತ್ಯ : ಮಗನಿಂದಲೇ ಜನ್ಮಕೊಟ್ಟ ತಾಯಿಯ ಮೇಲೆ ಅತ್ಯಾಚಾರ!

by Mallika
0 comments

ಯಾರೇ ಈ ಸುದ್ದಿಯನ್ನು ಓದಿದದರೆ ಒಂದು ಕ್ಷಣ ಮನಸ್ಸು ಅಸಹ್ಯಗೊಳ್ಳುತ್ತೆ. ಜಗತ್ತಿನಲ್ಲಿ ಇಂಥಹ ಜನ ಕೂಡಾ‌ ಇದ್ದಾರಾ ಅಂತ ಅನಿಸದೇ ಇರದು. ಹೆತ್ತ ತಾಯಿಯ ಮೇಲೆ ಮಗನೇ ಅತ್ಯಾಚಾರ ಮಾಡಿದ ಹೇಯ ಘಟನೆಯೊಂದು ದಾಂಡೇಲಿಯಲ್ಲಿ ನಡೆದಿದೆ.

ಕುಡಿತದ ದಾಸನಾಗಿರುವ ಮಗನೊಬ್ಬ ಜನ್ಮಕೊಟ್ಟ ತಾಯಿ ಮೇಲೆ ಒಂದೇ ದಿನ ಎರಡು ಬಾರಿ ಅತ್ಯಾಚಾರ ಎಸಗಿದ ಹೇಯ ಘಟನೆ ಪಟ್ಟಣದಲ್ಲಿ ಸಂಭವಿಸಿದೆ.

ಕೂಲಿ ಕೆಲಸಗಾರ ರೋಕಿ ಜಾನ್ ಪುಡ್ತೋಳ(24) ಹೇಯ ಕೃತ್ಯ ಎಸಗಿದ ಆರೋಪಿ. ಈತ ತಾಯಿ ಜತೆ ದಾಂಡೇಲಿ ಪಟ್ಟಣದ ಅರಣ್ಯ ಇಲಾಖೆ ಡಿಪೋ ಆವರಣದಲ್ಲಿ ವಾಸವಿದ್ದ. ಭಾನುವಾರ ಬೆಳಗಿನ ಜಾವದಲ್ಲಿ ನಡೆದಿದೆ. ಈತ, 52 ವರ್ಷದ ತನ್ನ ತಾಯಿಯೊಂದಿಗೆ ವಾಸವಾಗಿದ್ದ.

ಎಂದಿನಂತೆ ಶನಿವಾರ(ಜು.2) ರಾತ್ರಿಯೂ ಮದ್ಯ ಸೇವಿಸಿ ಮನೆಗೆ ರೋಕಿ ಜಾನ್ ಪುಡ್ತೋಳ ಬಂದಿದ್ದ. ಅಂದು ತಡರಾತ್ರಿ ನಿದ್ರೆಮಂಪರಿನಲ್ಲಿದ್ದ ತಾಯಿಯನ್ನು ಎಬ್ಬಿಸಿ ಮಗ, ಏನೋ ಮಾತಾಡಬೇಕು ಎಂದು ಸೋಫಾ ಕಡೆ ಕರೆದು ಬಲಾತ್ಕಾರ ಮಾಡಿದ್ದಾನೆ.

ಈ ಘಟನೆಯಿಂದ ಆಘಾತಕ್ಕೀಡಾದ ತಾಯಿ, ಕಣ್ಣೀರು ಹಾಕುತ್ತಲೇ ಕತ್ತಲಲ್ಲಿ ಮನೆಯ ಹೊರಗೆ ಬಂದು ಸುಮಾರು ಹೊತ್ತು ಒಬ್ಬರೇ ಕುಳಿತು, ನಂತರ ಮಗನಿಂದ ತಪ್ಪಿಸಿಕೊಂಡು ತನ್ನ ಕೋಣೆ ಸೇರಿಕೊಂಡಿದ್ದರು. ಬೆಳಗ್ಗೆ 6ರ ಸುಮಾರಿಗೆ ಮತ್ತೆ ಬಂದ ಕಾಮಾಂಧ ಮಗ “ತಾನು ಎಲ್ಲಿಯೋ ಹೋಗಬೇಕು” ಎಂದು ಕೂಗಿ ಕರೆದು, ತಾಯಿಗೆ ಮತ್ತೊಮ್ಮೆ ಬೆದರಿಕೆ ಹಾಕುತ್ತಾ ಇನ್ನೊಮ್ಮೆ ಅತ್ಯಾಚಾರವೆಸಗಿದ್ದಾನೆ. ನೊಂದ ತಾಯಿ ಮಗನ ಈ ಕುಕೃತ್ಯಕ್ಕೆ ನಲುಗಿದ್ದಾರೆ. ಈ ಘಟನೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

You may also like

Leave a Comment