Home » ಚಾರ್ಜಿಂಗ್ ವೇಳೆ ಕಾಣಿಸಿಕೊಂಡ ಬೆಂಕಿ, 7 ಎಲೆಕ್ಟ್ರಿಕಲ್‌ ಬೈಕ್‍ಗಳು ಸುಟ್ಟು ಕರಕಲು

ಚಾರ್ಜಿಂಗ್ ವೇಳೆ ಕಾಣಿಸಿಕೊಂಡ ಬೆಂಕಿ, 7 ಎಲೆಕ್ಟ್ರಿಕಲ್‌ ಬೈಕ್‍ಗಳು ಸುಟ್ಟು ಕರಕಲು

0 comments

ಮುಂಬೈ: ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜಿಂಗ್‌ ವೇಳೆ ಬೆಂಕಿ ಹತ್ತಿಕೊಂಡು ಬ್ಯಾಟರಿ ಬ್ಲಾಸ್ಟ್ ಆದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಇದೀಗ ಇದೇ ಸಾಲಿಗೆ ಮತ್ತೊಂದು ಘಟನೆ ಸೇರಿದ್ದು, ಶೋ ರೂಮ್‌ ನಲ್ಲಿ ಚಾರ್ಜಿಂಗ್‌ ಮಾಡುತ್ತಿದ್ದ ವೇಳೆ ಎಲೆಕ್ಟ್ರಿಕಲ್‌ ಬೈಕ್‌ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಪುಣೆಯ ಗಂಗಾಧಾಮ್ ಪ್ರದೇಶದ ಬಳಿ ಇರುವ ಇ-ಬೈಕ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಎಲೆಕ್ಟ್ರಿಕಲ್‌ ಬೈಕ್‌ ಚಾರ್ಜಿಂಗ್ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದಿಂದ 7 ಎಲೆಕ್ಟ್ರಿಕಲ್ ಬೈಕ್‍ಗಳು ಸುಟ್ಟು ಕರಕಲಾಗಿದೆ.

ಆದರೆ, ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

You may also like

Leave a Comment