Home » ಉಡುಪಿ : ನಾಡದೋಣಿ ಮಗುಚಿ ಸಮುದ್ರಪಾಲಾದ ಯುವಕ

ಉಡುಪಿ : ನಾಡದೋಣಿ ಮಗುಚಿ ಸಮುದ್ರಪಾಲಾದ ಯುವಕ

0 comments

ಉಡುಪಿ: ನಾಡದೋಣಿ ಮಗುಚಿ ಯುವಕ ಸಮುದ್ರ ಪಾಲಾಗಿರುವ ಘಟನೆ ನಡೆದಿದೆ.

ಮೃತ ಯುವಕ ಪಾರಂಪಳ್ಳಿ ನಿವಾಸಿ ಸುಮಂತ್ ಮೊಗವೀರ (23) ಎಂದು ತಿಳಿದುಬಂದಿದೆ.

ಪಾರಂಪಳ್ಳಿ ಪಡುಕರೆಯ ಕಡಲ ಕಿನಾರೆಯಲ್ಲಿ ನಿನ್ನೆ ಬೆಳಿಗ್ಗೆ ಸಂದೀಪ್, ಪ್ರಜ್ವಲ್ ಹಾಗೂ ಸುಮಂತ್ ಎಂಬ ಮೂವರು ಯುವಕರು ನಾಡ ದೋಣಿಯ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗೆ ಸಿಲುಕಿ ದೋಣಿಯಲ್ಲಿದ್ದ ಮೂವರು ಮುಗುಚಿ ಬಿದ್ದಿರುವ ಘಟನೆ ನಡೆದಿದೆ.

ಈ ವೇಳೆ ಭಾರೀ ಗಾತ್ರದ ಅಲೆಗಳಿಗೆ ಸಿಲುಕಿ ಸುಮಂತ್ ಸಮುದ್ರ ಪಾಲಾಗಿದ್ದಾರೆ. ಉಳಿದ ಇಬ್ಬರಾದ ಸಂದೀಪ್ ಮತ್ತು ಪ್ರಜ್ವಲ್ ಅಲೆಯ ರಭಸದ ನಡುವೆಯೂ ಈಜಿ ದಡ ಸೇರಿ, ಅದೃಷ್ಟವಶಾತ್ ಬದುಕುಳಿದಿದ್ದಾರೆ.

You may also like

Leave a Comment