Home » ನಾವು ಕನ್ನಯ್ಶಾ ಆರೋಪಿಗಳನ್ನು 4 ಗಂಟೆಯಲ್ಲಿ ಹಿಡಿದಿದ್ದೇವೆ, ನಿಮಗೆ 48 ಸಾಕಾಗಿಲ್ಲ – ರಾಜಸ್ಥಾನ ಕಾಂಗ್ರೆಸ್ ಮುಖ್ಯಮಂತ್ರಿ ರಾಜ್ಯಕ್ಕೆ ಛೀಮಾರಿ !

ನಾವು ಕನ್ನಯ್ಶಾ ಆರೋಪಿಗಳನ್ನು 4 ಗಂಟೆಯಲ್ಲಿ ಹಿಡಿದಿದ್ದೇವೆ, ನಿಮಗೆ 48 ಸಾಕಾಗಿಲ್ಲ – ರಾಜಸ್ಥಾನ ಕಾಂಗ್ರೆಸ್ ಮುಖ್ಯಮಂತ್ರಿ ರಾಜ್ಯಕ್ಕೆ ಛೀಮಾರಿ !

0 comments

ನವದೆಹಲಿ: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮಾಹಿತಿ ಎಲ್ಲೆಡೆ ವ್ಯಾಪಕವಾಗಿ ಹರಡಿದ್ದು, ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ಇದುವರೆಗೂ ಜೈಲಿಗೆ ಕಳುಹಿಸಿದ ಕುರಿತು ರಾಜಸ್ಥಾನ ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರವೀಣ್ ನೆಟ್ಟಾರೆ ಪ್ರಕರಣವನ್ನು ಕನ್ಹಯ್ಯಾ ಲಾಲ್ ಪ್ರಕರಣಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲಟ್ ಹೋಲಿಸಿ ಖಂಡಿಸಿದ್ದಾರೆ. ನೆಟ್ಟಾರೆ ಹತ್ಯೆ ಮಾಡಿದ ಆರೋಪಿಯನ್ನು 48 ಗಂಟೆಯಾದರೂ ಕಂಬಿ ಹಿಂದೆ ಹೋಗಿಲ್ಲ ಎಂದು ಎಂದು ಟ್ವಿಟ್ ಮಾಡಿದ್ದಾರೆ.

ಟ್ವೀಟ್ ನಲ್ಲಿ “ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಭೀಕರ ಹತ್ಯೆಯನ್ನು ನಾನು ಖಂಡಿಸುತ್ತೇನೆ. 48 ಗಂಟೆಗಳ ನಂತರವೂ ಆರೋಪಿಗಳು ಇನ್ನೂ ಕಂಬಿಯ ಹಿಂದೆ ಬಿದ್ದಿಲ್ಲ. ಉದಯಪುರದಲ್ಲಿ ರಾಜಸ್ಥಾನ ಪೊಲೀಸರು ಕನಯ್ಯಾಲಾಲ್ ಹತ್ಯೆ ಆರೋಪಿಗಳನ್ನು 4 ಗಂಟೆಯೊಳಗೆ ಬಂಧಿಸಿದ್ದರು”.

ಕುಟುಂಬದ ದುಃಖದ ಸಮಯದಲ್ಲಿ ಅವರನ್ನು ಬೆಂಬಲಿಸಲು ನಮ್ಮ ಸರ್ಕಾರವು ಕನ್ಹಯ್ಯಾ ಲಾಲ್ ಅವರ ಇಬ್ಬರು ಪುತ್ರರಿಗೂ ಸರ್ಕಾರಿ ಉದ್ಯೋಗ, 50 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಕರ್ನಾಟಕ ಸರ್ಕಾರವು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಕುಟುಂಬಕ್ಕೆ ಪರಿಹಾರ ನೀಡಬೇಕು. ಅವರ ನೋವಿನಲ್ಲಿ ಜೊತೆಯಾಗಬೇಕು ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

You may also like

Leave a Comment