Home » ಫಾಝಿಲ್ ಕೊಲೆ ಪ್ರಕರಣ : ಯಾರನ್ನೂ ಬಂಧಿಸಿಲ್ಲ ,ಶಂಕಿತರ ವಿಚಾರಣೆ ನಡೆಯುತ್ತಿದೆ

ಫಾಝಿಲ್ ಕೊಲೆ ಪ್ರಕರಣ : ಯಾರನ್ನೂ ಬಂಧಿಸಿಲ್ಲ ,ಶಂಕಿತರ ವಿಚಾರಣೆ ನಡೆಯುತ್ತಿದೆ

by Praveen Chennavara
0 comments

ಸುರತ್ಕಲ್ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

21 ಮಂದಿಯ ಪೈಕಿ ಕೆಲ ಬಜರಂಗದಳದ ಕಾರ್ಯಕರ್ತರೂ ಸೇರಿದ್ದು, ಕೋಮು ದ್ವೇಷದ ಹಿನ್ನೆಲೆಯಲ್ಲಿ ಫಾಝಿಲ್ ಕೊಲೆ ನಡೆದಿದೆಯಾ ಅಥವಾ ಬೇರೇನಾದರೂ ಕಾರಣ ಇದೆಯಾ ಎಂಬ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿರುವುದಾಗಿ ಕಮೀಷನ‌ ಎನ್. ಶಶಿಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಲ್ಲದೇ ಈ ಮೊದಲೇ ಕರಾವಳಿ ಉದ್ವಿಗ್ನಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪೋಲಿಸರ ಹೇಳಿಕೆಯ ವಿನಃ ಸುಖಾಸುಮ್ಮನೆ ವದಂತಿಗಳನ್ನು ಹರಡದಂತೆ ಮಾಧ್ಯಮಗಳು ಹಾಗೂ ಸಾರ್ವಜನಿಕರಿಗೆ ಕಮೀಷನರ್ ಮನವಿ ಮಾಡಿದ್ದಾರೆ.

You may also like

Leave a Comment