Home » ಆಟದಲ್ಲಿ ಕಳ್ಳನಾಗಿದ್ದ ಬಾಲಕನಿಗೆ ನಿಜವಾಗಿ ಗುಂಡು ಹಾರಿಸಿ ಕೊಂದೇ ಬಿಟ್ಟ ಪೊಲೀಸ್!

ಆಟದಲ್ಲಿ ಕಳ್ಳನಾಗಿದ್ದ ಬಾಲಕನಿಗೆ ನಿಜವಾಗಿ ಗುಂಡು ಹಾರಿಸಿ ಕೊಂದೇ ಬಿಟ್ಟ ಪೊಲೀಸ್!

0 comments

ಕಳ್ಳ ಪೊಲೀಸ್ ಆಟವಾಡುತ್ತಿದ್ದಾಗ ಕಳ್ಳನ ಪಾತ್ರದಲ್ಲಿದ್ದ ಪಕ್ಕದ ಮನೆಯ ಬಾಲಕನನ್ನು ಬಿಜೆಪಿ ಮುಖಂಡನ ಮಗ ನಿಜವಾಗಿ ಗುಂಡು ಹಾರಿಸಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್​ ಜೈಸ್ವಾಲ್​ ಅವರ 10 ವರ್ಷದ ಮಗ ನೆರೆ ಮನೆಯ ಮಕ್ಕಳೊಂದಿಗೆ ಕಳ್ಳ ಪೊಲೀಸ್​ ಆಟವಾಡುತ್ತಿದ್ದ. ಈ ಆಟದಲ್ಲಿ ಬಾಲಕ ಪೊಲೀಸ್​ ಆಗಿದ್ದ. ಆಟದಲ್ಲಿ ಕಳ್ಳತನ ಮಾಡಲು ನೆರೆಮನೆಯ ಮಕ್ಕಳು ಬಂದಿದ್ದರು. ಅವರನ್ನು ಹೊಡೆದು ಓಡಿಸುವಾಗ ಏನೂ ಅರಿಯದ ಬಾಲಕ ಅಪ್ಪನ ಪರವಾನಗಿ ಇರುವ ಗನ್​ ತಂದಿದ್ದಾನೆ. ಬಳಿಕ ಕಳ್ಳರಾಗಿದ್ದ ಮಕ್ಕಳ ಮೇಲೆ ಹಾರಿಸಿದ್ದಾನೆ.

ಈ ಘಟನೆಯಲ್ಲಿ ಓರ್ವ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಅರಿವಿಲ್ಲದೆ ಮಕ್ಕಳು ಮಾಡಿದ ತಪ್ಪಿಗೆ ಪುಟ್ಟ ಬಾಲಕನ ಪ್ರಾಣ ಕಳೆದುಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

You may also like

Leave a Comment