Home » ಕುದಿಯುತ್ತಿದ್ದ ಬಿಸಿನೀರಿನ ಪಾತ್ರೆಗೆ ಬಿದ್ದ ಮಗು ಸಾವು!!

ಕುದಿಯುತ್ತಿದ್ದ ಬಿಸಿನೀರಿನ ಪಾತ್ರೆಗೆ ಬಿದ್ದ ಮಗು ಸಾವು!!

0 comments

ಮೈಸೂರು: ಕುದಿಯುತ್ತಿದ್ದ ಬಿಸಿ ನೀರಿನ ಪಾತ್ರೆಗೆ ಆಕಸ್ಮಿಕವಾಗಿ ಮಗುವೊಂದು ಬಿದ್ದು ಮೃತಪಟ್ಟ ಘಟನೆಯೊಂದು ಮೈಸೂರು ತಾಲೂಕಿನ ಮಾರ್ಬಲ್ಲಿ ಹುಂಡಿ ಎಂಬ ಗ್ರಾಮದಲ್ಲಿ ನಡೆದಿದೆ.

ಮೃತ ಮಗುವನ್ನು ಪ್ರಕೃತಿ(02) ಎಂದು ಗುರುತಿಸಲಾಗಿದೆ. ಜುಲೈ 15ರಂದು ಘಟನೆ ನಡೆದಿದ್ದು, ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಪಕ್ಕದ ಮನೆಯಲ್ಲಿ ಕೂಲಿ ಕಾರ್ಮಿಕರಿಗಾಗಿ ಮಾಡಲಾಗುತ್ತಿತ್ತು.

ಈ ವೇಳೆ ಆಟವಾಡುತ್ತಿದ್ದ ಮಗು ಅಡುಗೆಗಾಗಿ ಇಟ್ಟಿದ್ದ ಬಿಸಿ ನೀರಿನ ಪಾತ್ರೆಯೊಳಗೆ ಆಕಸ್ಮಿಕವಾಗಿ ಬಿದ್ದಿದೆ.ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

You may also like

Leave a Comment