Home » ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ | ಇಬ್ಬರ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ | ಇಬ್ಬರ ಬಂಧನ

by Praveen Chennavara
0 comments

ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರ ತನಿಖೆ ಚುರುಕುಗೊಂಡಿದೆ. ಇದೀಗ ಪ್ರವೀಣ್ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ದಾಂ ಮತ್ತು ಹ್ಯಾರಿಸ್ ಬಂಧಿತ ಪೊಲೀಸರು. ಆರೋಪಿಗಳನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಬಂಧಿತ ಆರೋಪಿಗಳು ಸದ್ದಾಂ, 32 ವರ್ಷ, ಪಲ್ಲಿಮಜಲು, ಬೆಳ್ಳಾರೆ
ಹ್ಯಾರಿಸ್, 42 ವರ್ಷ, ಪ್ರಾಯ- ಪಳ್ಳಿಮಜಲು, ಬೆಳ್ಳಾರೆ

ಈಗಾಗಲೇ ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಅವರನ್ನು ಈಗಾಗಲೇ 28.07.2022 ರಂದು ಬಂಧಿಸಲಾಗಿದೆ. ಈ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ನಂತರ, ತನಿಖೆಯನ್ನು ಮುಂದುವರೆಸಲಾಯಿತು ಮತ್ತು ಹೆಚ್ಚಿನ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸದ್ದಾಂ ಮತ್ತು ಹಾರಿಸ್ ಅನ್ನು ಬಂಧಿಸಲಾಗಿದೆ.

ಇದುವರೆಗೆ ನಡೆಸಲಾದ ತನಿಖೆಯ ಆಧಾರದ ಮೇಲೆ, ತನಿಖಾ ತಂಡವು ಈ ಪ್ರಕರಣದಲ್ಲಿ ಶಂಕಿತ ಸಂಚುಕೋರರು ಮತ್ತು ಹಲ್ಲೆಕೋರರನ್ನು ಗುರುತಿಸಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ.

You may also like

Leave a Comment