Home » ಮಲಗಿದ್ದಾಗ ಎಸಿ ಸ್ಫೋಟಗೊಂಡು ನವವಿವಾಹಿತ ದಾರುಣ ಸಾವು|ಅಷ್ಟಕ್ಕೂ ಹೆಂಡತಿ ಎಲ್ಲಿದ್ದಳು ಗೊತ್ತೇ?

ಮಲಗಿದ್ದಾಗ ಎಸಿ ಸ್ಫೋಟಗೊಂಡು ನವವಿವಾಹಿತ ದಾರುಣ ಸಾವು|ಅಷ್ಟಕ್ಕೂ ಹೆಂಡತಿ ಎಲ್ಲಿದ್ದಳು ಗೊತ್ತೇ?

by Mallika
0 comments

ಮದುವೆಯ ಹೊಂಗನಸನ್ನು ಕಾಣುತ್ತಿದ್ದ ಜಸ್ಟ್ ಮ್ಯಾರೀಡ್ ವ್ಯಕ್ತಿ ಎಸಿ ಸ್ಫೋಟಗೊಂಡ ಮಲಗಿದ್ದಲ್ಲೇ ಸುಟ್ಟು ಕರಕಲಾಗಿರುವ ದುರಂತ ಘಟನೆ ಚೆನ್ನೈನಲ್ಲಿ ಸಂಭವಿಸಿದೆ.

ಮನೆಯಲ್ಲಿ ರಾತ್ರಿ ಮಲಗಿದ್ದಾಗ ಎಸಿ ಸ್ಫೋಟಗೊಂಡು ನವ ವಿವಾಹಿತನೋರ್ವ ಸಾವನ್ನಪ್ಪಿದ್ದಾನೆ. ಈ ದಾರುಣ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

28 ವರ್ಷದ ಶ್ಯಾಮ್ ಎಂಬಾತನೇ ಮೃತ ದುರ್ದೈವಿ.

ಪೆರಂಬೂರ್‌ನ ಮನವಲನ್ ಬಡಾವಣೆಯ ನಿವಾಸಿಯಾದ ಶ್ಯಾಮ್ ತಮ್ಮ ಮನೆಯ ಕೆಳ ಮಹಡಿಯಲ್ಲಿ ಮಲಗಿದ ಸಂದರ್ಭದಲ್ಲಿ ಆಗಿದೆ. ತಂದೆ ಪ್ರಭಾಕರನ್ ಮೇಲ್ಮಹಡಿಯಲ್ಲಿ ನಿದ್ರೆ ಮಾಡುತ್ತಿದ್ದರು. ಆದರೆ, ರಾತ್ರಿ ಕೆಳ ಮಹಡಿಯಿಂದ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದ್ದು ತಂದೆ ಕೆಳಗಡೆ ಓಡಿ ಬಂದಿದ್ದಾರೆ. ಆಗ ದಟ್ಟ ಹೊಗೆ ಆವರಿಸಿದ್ದನ್ನು ಕಂಡ ಪ್ರಭಾಕರನ್ ಬಾಗಿಲು ಮುರಿದು ಒಳಹೋಗಿ ನೋಡಿದರೆ, ಎಸಿ ಸ್ಫೋಟದಿಂದ ಮಗ ಶ್ಯಾಮ್ ಸುಟ್ಟು ಕರಕಲಾಗಿದ್ದರು.

ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಶ್ಯಾಮ್ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಶ್ಯಾಮ್‌ಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ದುರ್ಘಟನೆ ನಡೆದ ದಿನ ಪತ್ನಿ ತವರು ಮನೆಗೆ ಹೋಗಿದ್ದರು ಎಂದು ತಿಳಿದು ಬಂದಿದೆ.

You may also like

Leave a Comment