Home » ಸುಬ್ರಹ್ಮಣ್ಯ : ವಿವಾಹಿತೆಯನ್ನು ಮದುವೆಯಾಗುವುದೆಂದು ನಂಬಿಸಿ ಅತ್ಯಾಚಾರ | 1.70 ಲಕ್ಷ ರೂ ಹಣದೊಂದಿಗೆ ಆತ ನಾಪತ್ತೆ

ಸುಬ್ರಹ್ಮಣ್ಯ : ವಿವಾಹಿತೆಯನ್ನು ಮದುವೆಯಾಗುವುದೆಂದು ನಂಬಿಸಿ ಅತ್ಯಾಚಾರ | 1.70 ಲಕ್ಷ ರೂ ಹಣದೊಂದಿಗೆ ಆತ ನಾಪತ್ತೆ

by Praveen Chennavara
0 comments

ಕಡಬ: ವಿವಾಹಿತ ಮಹಿಳೆಯನ್ನು ಅತ್ಯಾಚಾರಗೈದು ಮದುವೆಯಾಗುತ್ತೇನೆಂದು ನಂಬಿಸಿ 1.70 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯು ತನ್ನ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೇ.20 ರಂದು ರಾತ್ರಿ 10 ಗಂಟೆಗೆ ಪವನ್ ಎಂಬಾತ ಮದ್ಯಪಾನ ಮಾಡಿಕೊಂಡು ಯುವತಿಯನ್ನು ಅತ್ಯಾಚಾರಗೈದಿದ್ದಾನೆ.

ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದಾಗ ನಾನು ನಿನ್ನನ್ನು ಮದುವೆಯಾಗುತ್ತೇನೆ. ಪೊಲೀಸ್ ಕಂಪ್ಲೇಟ್ ಮಾಡಬೇಡ ಎಂದು ಹೇಳಿ ವಕೀಲರ ಮುಖಾಂತರ ಲಿಖಿತ ಒಪ್ಪಿಗೆ ನೀಡಿದ್ದು,ಇದಕ್ಕಾಗಿ ಮಹಿಳೆಯಿಂದ 1,70,000 ರೂಪಾಯಿ ಹಣವನ್ನು ಪಡೆದುಕೊಂಡು ಈಗ ಮದುವೆಯಾಗುವುದಿಲ್ಲ ಎಂದು ವಂಚಸಿದ್ದಾನೆ

ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ.

You may also like

Leave a Comment