Home » ಪಾನಿಪುರಿ ತಿನ್ನಲೆಂದು ಹೊರಗೆ ಕರೆತಂದು ಯುವಕನ ಹತ್ಯೆ!

ಪಾನಿಪುರಿ ತಿನ್ನಲೆಂದು ಹೊರಗೆ ಕರೆತಂದು ಯುವಕನ ಹತ್ಯೆ!

0 comments

ಶಿವಮೊಗ್ಗ: ಪಾನಿಪುರಿ ತಿನ್ನಲು ಕರೆತಂದು ಯುವಕನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಶಿವಮೊಗ್ಗದ ಗಾಡಿಕೊಪ್ಪ ಬಳಿ ತಡರಾತ್ರಿ ನಡೆದಿದೆ.

ಹೊಸಮನೆ ನಿವಾಸಿ ಕಿರಣ್ ಅಲಿಯಾಸ್ ಪುಚ್ಚಿ(23) ಕೊಲೆಯಾದ ಯುವಕ.

ಕಾರ್ತಿಕ್ ಎಂಬಾತ ನಿನ್ನೆ ರಾತ್ರಿ ಪಾನಿಪುರಿ ತಿನ್ನಲೆಂದು ಕಿರಣ್​​ನನ್ನು ಮನೆಯಿಂದ ಕರೆದುಕೊಂಡು ಬಂದಿದ್ದ. ಬಳಿಕ, ಗಾಡಿಕೊಪ್ಪದ ಗಂಧರ್ವ ಬಾರ್ ಹಿಂಭಾಗದ ಪ್ರದೇಶದಲ್ಲಿ ಮೂವರು ಯುವಕರು ಸೇರಿ ಪಾರ್ಟಿ ಮಾಡಿದ್ದು, ಈ ವೇಳೆ ಗಲಾಟೆ ಮಾಡಿಕೊಂಡಿದ್ದಾರೆ.

ಗಲಾಟೆ ಜೋರಾಗಿ ಬಳಿಕ ಕಿರಣ್ ಮೇಲೆ ಪ್ರಜ್ವಲ್ ಹಾಗೂ ಕಾರ್ತಿಕ್ ಹಲ್ಲೆ ಮಾಡಿದ್ದಾರೆ. ಕಿರಣ್ ತಲೆಗೆ ಬಾಟೆಲ್ ಮತ್ತು ಕಲ್ಲಿನಿಂದ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡಿರುವ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂದ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ವಿಚಾರಣೆ ನಡೆಸಲಾಗುತ್ತಿದೆ.

You may also like

Leave a Comment