Home » 35 ಜೀವಿಗಳನ್ನು ಹೊತ್ತಿದ್ದ ಬಸ್ ಪಲ್ಟಿ ಆಗಲು ಕಾರಣವಾಯಿತೇ ಮಬ್ಬು ಕವಿದ ಮಾರ್ಗ

35 ಜೀವಿಗಳನ್ನು ಹೊತ್ತಿದ್ದ ಬಸ್ ಪಲ್ಟಿ ಆಗಲು ಕಾರಣವಾಯಿತೇ ಮಬ್ಬು ಕವಿದ ಮಾರ್ಗ

0 comments

ಬೆಳಗಾವಿ: ಮಳೆಯ ಅವಾಂತರಗಳು ಒಂದಾ… ಎರಡಾ… ಅದೆಷ್ಟೋ ಹಾನಿ ಉಂಟುಮಾಡಿರುವ ಮಳೆ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು, 35 ಜನ ಪ್ರಯಾಣಿಕರಿದ್ದ ಬಸ್ ಮಾಡಿದೆ.

ಹೌದು, ಬೆಳಗಾವಿಯ ಬಡಕೊಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಮಳೆಯ ಕಾರಣದಿಂದಾಗಿ, ಮಬ್ಬು ಕವಿದ ವಾತಾವರಣದಿಂದಾಗಿ, ಚಾಲಕನಿಗೆ ರಸ್ತೆ ಕಾಣದಾಗಿದೆ. ಇದರ ಪರಿಣಾಮವಾಗಿ ಬಸ್ ಮಗುಚಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.

ಆದರೆ, ಬಸ್ ನಲ್ಲಿದ್ದ ಐವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

You may also like

Leave a Comment