ಶಿವಮೊಗ್ಗ: ಪ್ಲೆಕ್ಸ್ ವಿಚಾರಕ್ಕೆ ನಡೆಯುತ್ತಿರುವ ಕಿತ್ತಾಟ ಈಗ ಭದ್ರಾವತಿಗೆ ಬಂದಿದ್ದು, ನಗರದ ಭಜರಂಗದಳದ ಕಾರ್ಯಕರ್ತನ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ನಿಷೇಧಾಜ್ಞೆ ನಡುವೆಯೂ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ. ಕಾರ್ಯಕರ್ತನ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ.
ಕಾರ್ಯಕರ್ತನ ಸುನೀಲ್ ಮೇಲೆ ಹತ್ಯೆಗೈದು ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಭದ್ರಾವತಿ ನಗರದ ನೆಹರೂ ಬಡವಾಣೆಯಲ್ಲಿ ಘಟನೆ ನಡೆದಿದೆ. ಕೂದಲೆಳೆಯ ಅಂತರದಲ್ಲಿ ಸುನೀಲ್ ಪಾರಾಗಿದ್ದಾರೆ. ಗಾಯಾಳು ಸುನೀಲ್ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಚ್ಚಿ ಅಲಿಯಾಸ್ ಮುಬಾರಕ್ ಸೇರಿ ಮೂವರಿಂದ ಹಲ್ಲೆ ನಡೆದಿದೆ.
ಸುನೀಲ್ (25) ಮೇಲೆ ಇಂದು ಬೆಳಗ್ಗೆ 8:30ರ ವೇಳೆಗೆ ಭದ್ರಾವತಿಯ ನೆಹರು ನಗರದಲ್ಲಿ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಸುನೀಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಜಾಗ್ರತಾ ಕ್ರಮವಾಗಿಯೇ ಭದ್ರಾವತಿಯಲ್ಲೂ 144 ಸೆಕ್ಷನ್ ನಿಷೇಧಾಜ್ಞೆ ಜಾರಿಯಾಗಿದೆ. ನಿಷೇಧಾಜ್ಞೆ ನಡುವೆಯೂ ನಾಲ್ವರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
