Home » ಕುಟುಂಬದವರೊಂದಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ, ಆರು ವರ್ಷದ ಬಾಲಕನ ಕತ್ತು ಸೀಳಿದ ಗಾಳಿಪಟದ ದಾರ

ಕುಟುಂಬದವರೊಂದಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ, ಆರು ವರ್ಷದ ಬಾಲಕನ ಕತ್ತು ಸೀಳಿದ ಗಾಳಿಪಟದ ದಾರ

0 comments

ಸ್ಕೂಟರ್ ನಲ್ಲಿ ತನ್ನ ಕುಟುಂಬದವರೊಂದಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರವೊಂದು ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆಯೊಂದು ನಡೆದಿದೆ.

ಪಂಜಾಬ್‌ನ ಲೂಧಿಯಾನ ಜಿಲ್ಲೆಯಲ್ಲಿ ಆರು ವರ್ಷದ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರ ಸಿಲುಕಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಮೃತ ಬಾಲಕನನ್ನು ಇಶಾರ್ ನಗರದ ನಿವಾಸಿ ದಕ್ಷ್ ಗಿರಿ (6) ಎಂದು ಗುರುತಿಸಲಾಗಿದೆ.

ಇಲ್ಲಿನ ಗಿಲ್ ಕೆನಾಲ್ ಸೇತುವೆಯ ಬಳಿ ಮಂಗಳವಾರ ದಕ್ಷ್ ಗಿರಿ ತನ್ನ ಕುಟುಂಬದೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಿಷೇಧಿತ ಗಾಳಿಪಟದ ದಾರ ಆತನ ಕುತ್ತಿಗೆ ಸೀಳಿದೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ
ಪ್ರಯೋಜನವಾಗಲಿಲ್ಲ.

ಬಾಲಕನ ಸಾವಿಗೆ ಕಾರಣವಾದ ಅಪರಿಚಿತ ಆರೋಪಿಗಳ ವಿರುದ್ಧ ಸದರ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

You may also like

Leave a Comment