Home » ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯನನ್ನೇ ಬ್ಯಾನ್ ಮಾಡುತ್ತಾ ಕನ್ನಡ ಕಿರುತೆರೆ!?

ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯನನ್ನೇ ಬ್ಯಾನ್ ಮಾಡುತ್ತಾ ಕನ್ನಡ ಕಿರುತೆರೆ!?

0 comments

‘ಜೊತೆ ಜೊತೆಯಲಿ’ ಧಾರವಾಹಿ ಈಗ ಭಾರೀ ಸುದ್ದಿ ಮಾಡುತ್ತಿದೆ. ಈ ಧಾರಾವಾಹಿಯ ಸ್ಟಾರ್ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಈಗ ನಟ ಅನಿರುದ್ಧ್ ಹೊರ ನಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಉಹಾಪೋಹಗಳ ಮಾತುಗಳೇ ತುಂಬಿತ್ತು. ಈಗ ಈ ಮಾತು ನಿಜವಾಗಿದೆ.

ಧಾರಾವಾಹಿ ತಂಡದ ಮಾಹಿತಿ ಪ್ರಕಾರ, ತುಂಬಾ ದಿವಸದಿಂದ ಅನಿರುದ್ಧ್ ಧಾರವಾಹಿ ತಂಡದ ಜೊತೆಗೆ ಕಿರಿಕ್‌ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಅವರು ಎರಡು ಬಾರಿ ಕೂಡ ಧಾರವಾಹಿಯಿಂದ ಹೊರೆ ನಡೆದಿದ್ದರು ಆದರೆ ಅನೇಕರ ಸಂಧಾನದ ಫಲವಾಗಿ ಅವರು ಮತ್ತೆ ಅದೇ ಧಾರವಾಹಿಯಲ್ಲಿ ನಟನೆ ಶುರು ಮಾಡಿದ್ದರು. ಅಂದ ಹಾಗೇ ಆಗಸ್ಟ್ 18 ಧಾರಾವಾಹಿ ಚಿತ್ರೀಕರಣ ಮಾಡುವಾಗ ಅನಿರುದ್ಧ್ ಒಂದು ಸೀನ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು, ಚಿತ್ರೀಕರಣದವರು ಮನವೊಲಿಸಲು ಮುಂದಾದರು ಸಹ ಅವರು ಅದಕ್ಕೆ ಒಪ್ಪದೇ ಮನೆಗೆ ತೆರಳಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ನಡುವೆ ಕನ್ನಡ ಕಿರುತೆರೆಯಿಂದಲೇ ಅವರನ್ನು ಬ್ಯಾನ್‌ ಮಾಡಲು ಕೂಡ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಗುಮಾನಿ ಇದೆ. ಹಿರಿ ತೆರೆಯಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯದ ನಂತರ ಬಳಿಕ ಕಿರುತೆರೆಗೆ ಎಂಟ್ರಿ ನೀಡಿದ್ದು, ಭಾರಿ ಜನಪ್ರಿಯತೆಯನ್ನು ಗಳಿಸಿದ್ದರೆಂದೇ ಹೇಳಬಹುದು‌ ಆದರೆ ಅವರ ವರ್ತನೆಗಳೇ ಅವರಿಗೆ ಮುಳುವಾಗುತ್ತಿದ್ದು, ಅವರ ಮುಂದಿನ ಸಿನಿ ಪ್ರಯಾಣದ ಮೇಲೆ ಮೋಡ ಕವಿಯಲಿದೆ ಎನ್ನಲಾಗುತ್ತಿದೆ. ಇನ್ನೂ ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪದ ಬಗ್ಗೆ ನಟ ಅನಿರುದ್ದ್‌ ಅವರು ಯಾವ ರೀತಿಯಲ್ಲಿ ತಮ್ಮ ಸಮರ್ಥನೆಯನ್ನು ಹೇಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಮುಂದೇನಾಗುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.

You may also like

Leave a Comment