Home » ಉಡುಪಿ : ನೇಣುಬಿಗಿದುಕೊಂಡು ‌ಆತ್ಮಹತ್ಯೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ

ಉಡುಪಿ : ನೇಣುಬಿಗಿದುಕೊಂಡು ‌ಆತ್ಮಹತ್ಯೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ

0 comments

ಉಡುಪಿ : ಓದು ಎಂಬುದೇ ಶತ್ರುವಾಗಿ 9ನೇ ತರಗತಿ ವಿದ್ಯಾರ್ಥಿ ನೇಣುಬಿಗಿದುಕೊಂಡು ‌ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಂಗವಳ್ಳಿ ಗ್ರಾಮದ ನಿಲ್ಸಕಲ್ ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ‌ಮಾಡಿಕೊಂಡ ಬಾಲಕ ಗಣೇಶ(14) ಎಂದು ತಿಳಿದು ಬಂದಿದೆ.

ಹಾಲಾಡಿ ಪ್ರೌಡಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಗಣೇಶ್, ಮನೆಯ ಪಕ್ಕದಲ್ಲಿ ಇರುವ ಸೌದೆ ತುಂಬುವ ಮಾಡಿನ ಒಳಗಡೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಲೆಗೆ ಹೋಗಲು ಮನಸ್ಸು ಇಲ್ಲದೆ ಮನನೊಂದು ವಿದ್ಯಾರ್ಥಿ ಈ ರೀತಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನಷ್ಟು ಮಾಹಿತಿ ತನಿಖೆ ಬಳಿಕವಷ್ಟೇ ತಿಳಿದು ಬರಬೇಕಿದೆ.

You may also like

Leave a Comment