ಕೊರೊನಾ ವೈರಸ್ ಪ್ರಕರಣಗಳು ದೇಶಾದ್ಯಂತ ಹೆಚ್ಚಳವಾಗಿರುವ ಪ್ರಕರಣಗಳು ಮತ್ತೆ ಪತ್ತೆಯಾಗಿದೆ. ಭಾರತದಲ್ಲೂ ಕಂಡು ಬಂದಿದ್ದು, ಚೀನಾದಲ್ಲಿ ಕೂಡಾ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಿದ್ದು, ಚೀನಾದ ಕ್ಸಿಯಾಮೆನ್ ಪ್ರದೇಶದ ಅಧಿಕಾರಿಗಳು ಮಾನವರಿಗೆ ಮಾತ್ರವಲ್ಲ ಸಮುದ್ರ ಜೀವಿಗಳಾದ ಮೀನು ಮತ್ತು ಏಡಿಗಳಿಗೂ ಆರ್‌ಟಿಪಿಸಿಎಸ್ (RT-PCR Test )ಟೆಸ್ಟ್ ಮಾಡುತ್ತಿರುವ ಅಘಾತಕಾರಿ ವಿಡಿಯೋ ವೈರಲ್ ಆಗಿದೆ.
Videos of pandemic medical workers giving live seafood PCR tests have gone viral on Chinese social media. pic.twitter.com/C7IJYE7Ses
ಪಿಪಿಇ ಕಿಟ್ಗಳನ್ನು ಧರಿಸಿದ ಆರೋಗ್ಯ ಕಾರ್ಯಕರ್ತರು ಕೋವಿಡ್-19 ಪರೀಕ್ಷೆಗಾಗಿ ಮೀನಿನ ಬಾಯಿಯಲ್ಲಿ ಸ್ವ್ಯಾಬ್ಗಳನ್ನು ತೆಗೆದ ಟೆಸ್ಟ್ ಮಾಡುವುದನ್ನು ಕಾಣಬಹುದು . ಈ ವೀಡಿಯೊಗಳು ವೈರಲ್ ಆಗುತ್ತಿದ್ದಂತೆ 2 ಲಕ್ಷ ವೀಕ್ಷಣೆಗಳನ್ನು ಗಳಿಸಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತರರು ಅಧಿಕಾರಿಗಳ ನಡೆಯನ್ನು ಕಂಡು ದಿಗ್ಭ್ರಮೆಗೊಂಡರು. ಈ ವೀಡಿಯೋ ಕಂಟ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.