Home » ಸುಬ್ರಹ್ಮಣ್ಯ : ಕುಮಾರಧಾರ ನದಿಗೆ ಸ್ನಾನಕ್ಕಿಳಿದ ಪ್ರವಾಸಿಗ ಕಣ್ಮರೆ

ಸುಬ್ರಹ್ಮಣ್ಯ : ಕುಮಾರಧಾರ ನದಿಗೆ ಸ್ನಾನಕ್ಕಿಳಿದ ಪ್ರವಾಸಿಗ ಕಣ್ಮರೆ

by Praveen Chennavara
0 comments

ಕಡಬ : ಕುಕ್ಕೆ ಕ್ಷೇತ್ರಕ್ಕೆ ಬಂದ ಪ್ರವಾಸಿಗನೊಬ್ಬ ಕುಮಾರಧಾರ ನದಿ ಯಲ್ಲಿ ಸ್ನಾನ ಮಾಡಲು ಇಳಿದು ಕಣ್ಮರೆಯಾದ ಘಟನೆ ಆದಿತ್ಯವಾರ ಮದ್ಯಾಹ್ನ ನಡೆದಿದೆ.

ಮೂಲತಃ ಮಂಡ್ಯದ ಯುವಕ ಶಿವು( 25 ವ) ನೀರಿನಲ್ಲಿ ಕೊಚ್ಚಿ ಹೋದ ಯುವಕ. ಈತ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು
ಬೆಂಗಳೂರು ದೀಪಜಲಿ ನಗರದಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ.

21 ಜನರ ತಂಡ ವಿವಿಧ ಕ್ಷೇತ್ರಗಳ ಭೇಟಿಗೆ ಬಂದಿದ್ದು ಕುಕ್ಕೆಗೂ ಆಗಮಿಮಿಸಿ ಕುಮಾರಧಾರ ಸ್ನಾನಘಟ್ಟಕ್ಕೂ ಬಂದಿದ್ದರು. ಈ ವೇಳೆ ನದಿಗೆ ಇಳಿಯದಂತೆ ಸ್ನೇಹಿತರೂ ಸೂಚಿಸಿದರೂ ತಡೆಹಗ್ಗ ದಾಟಿ ನದಿ ನೀರಿಗೆ ಇಳಿದಿದ್ದಾನೆ ಎಂದು ಆತನ ಸ್ನೇಹಿತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಎಸ್.ಐ ಮಂಜುನಾಥ್ ಆಗಮಿಸಿದ್ದಾರೆ.ನದಿ ತಟದಲ್ಲಿ ಜತೆಗೆ ಬಂದಿದ್ದ ಸ್ನೇಹಿತರ ರೋಧನ ಮುಗಿಲು ಮುಟ್ಟಿದೆ.

ಸ್ಥಳದಲ್ಲಿ ಅಧಿಕ ಮಂದಿ ಸೇರಿದ್ದಾರೆ. ನದಿ ನೀರಿನಲ್ಲಿ ಕೊಚ್ಚಿ ಹೋದ ಯುವಕನ ಪತ್ತೆಗೆ ಬೋಟ್ ಬಳಸಿ ಹುಟುಕಾಟಕ್ಕೆ ಸಿದ್ದತೆ ನಡೆಸಲಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತದೆ.

You may also like

Leave a Comment