ರಸ್ತೆ ತೆರಿಗೆ ಪಾವತಿಸುವ ವಿಚಾರದಲ್ಲಿ ಮಹಿಳಾ ಟೋಲ್ ಪ್ಲಾಜಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರಿಗೆ ಕಪಾಳಮೋಕ್ಷ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ ಮಧ್ಯಪ್ರದೇಶದ ರಾಜ್‌ಗಢದಲ್ಲಿ ನಡೆದಿದೆ. ಮಹಿಳಾ ಉದ್ಯೋಗಿ ದಾಖಲೆ ಕೇಳಿದ್ದಕ್ಕೆ ಚಾಲಕ ಕೋಪಗೊಂಡು ವಾಗ್ವಾದ ಮಾಡಿ ಮಹಿಳೆಯ ಕನ್ನೆಗೆ ಹೊಡೆದಿದ್ದಾನೆ.
ಈ ಆರೋಪದ ಹಿನ್ನಲೆಯಲ್ಲಿ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
A man slapped a woman employee of a toll both in Rajgarh after she refused to let him go without paying the tax. The man is seen angrily walking towards the employee and then slapping her across the face, The woman hits him back with her footwear @ndtv@ndtvindiapic.twitter.com/hmK0ghdImX
ಬಿಯೋರಾ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್‌ಗಢ-ಭೋಪಾಲ್ ರಸ್ತೆಯಲ್ಲಿರುವ ಟೋಲ್ ಪ್ಲಾಜಾದಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.