Home » ಜೋಳಿಗೆಯಲ್ಲಿ ಮಲಗಿಸಿದ್ದ 9 ತಿಂಗಳ ಗಂಡು ಮಗು ನಾಪತ್ತೆ !

ಜೋಳಿಗೆಯಲ್ಲಿ ಮಲಗಿಸಿದ್ದ 9 ತಿಂಗಳ ಗಂಡು ಮಗು ನಾಪತ್ತೆ !

by Praveen Chennavara
0 comments

ಕಲಬುರ್ಗಿ : ಕೂಲಿ ಕೆಲಸಕ್ಕೆ ಹೋದ ಮಹಿಳೆಯ 9ತಿಂಗಳ ಹಸುಗೂಸು ನಾಪತ್ತೆಯಾದ ಪ್ರಕರಣ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಳಗ್ಗೆ ಕೂಲಿ ಕೆಲಸಕ್ಕೆ ಹೋದ ಗ್ರಾಮದ ಗೌಡಪ್ಪ ವಕ್ರಾಣಿ ಎಂಬವರ ಪತ್ನಿ ಶಾಂತಮ್ಮ ಎಂಬ ಮಹಿಳೆ ತನ್ನ 9 ತಿಂಗಳ ಮಗ ಬೀರಪ್ಪನನ್ನು ಮರಕ್ಕೆ ಕಟ್ಟಿದ ಜೋಳಿಗೆಯಲ್ಲಿ ಮಲಗಿಸಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದರು.

ಸ್ವಲ್ಪ ಸಮಯದ ನಂತರ ನೀರು ಕುಡಿಯಲು ಬಂದು ಜೋಳಿಗೆ ಕಡೆ ಗಮನ ಹರಿಸಿದಾಗ ಜೋಳಿಗೆಯಲ್ಲಿ ಮಗು ಕಾಣೆಯಾಗಿತ್ತು.

ಮಗು ಕಾಣದಾದಾಗ ತಾಯಿ ಶಾಂತಮ್ಮ ಗಾಬರಿಯಾಗಿ ಕಿರುಚಿದ್ದು, ಕಿರುಚಾಟ ಕೇಳಿದ ಹೊಲದಲ್ಲಿದ್ದ ಇತರ ಮಹಿಳಾ ಕೆಲಸಗಾರರು ಗಾಬರಿಯಿಂದ ಮರದ ಹತ್ತಿರ ಬಂದಾಗ ಕೂಸು ನಾಪತ್ತೆಯಾದ ವಿಷಯ ತಿಳಿದು, ಹೊಲದ ಸುತ್ತಲೆಲ್ಲ ಹುಡುಕಾಡಿದ್ದಾರೆ. ಆದರೆ ಮಗು ಬೀರಪ್ಪ ಎಲ್ಲಿಯೂ ಕಾಣಸಿಕ್ಕಿಲ್ಲ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಗ್ರಾಮಸ್ಥರು ಸುತ್ತಲಿನ ಜಮೀನುಗಳಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ.

ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment