ಸರ್ಕಾರಿ ಪದವಿ ಪೂರ್ವ ಕಾಲೇಜು ಕರ್ನಾಟಕದಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಸದ್ಯದಲ್ಲೆ ಅಧಿಸೂಚನೆ ಬಿಡುಗಡೆಯಾಗಲಿದೆ.
ಒಟ್ಟು 778 ಹುದ್ದೆಗಳ ನೇಮಕಾತಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮತಿ ನೀಡಿದೆ. ಹೀಗಾಗಿ ಈ ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿಯೇ ನೇರ ಈ ಕುರಿತ ಅಧಿಕೃತ ಅಧಿಸೂಚನೆ ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಲಿದೆ.
2021ನೇ ಸಾಲಿನ ಸೆಪ್ಟೆಂಬರ್ ತಿಂಗಳಲ್ಲಿ ಶಿಕ್ಷಣ ಸಚಿವರು ಕರ್ನಾಟಕದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಹುದ್ದೆಗಳ ಬಗ್ಗೆ ಮಾಹಿತಿ ನೀಡಿದ್ದರು. ಈ ಕಾಲೇಜುಗಳಿಗೆ ಮಂಜೂರಾದ ಒಟ್ಟು ಉಪನ್ಯಾಸಕ ಹುದ್ದೆಗಳ ಸಂಖ್ಯೆ 12,857. ಅದರಲ್ಲಿ 9354 ಹುದ್ದೆಗಳು ಭರ್ತಿಯಾಗಿದ್ದು ಉಪನ್ಯಾಸಕರು ವಿವಿಧ ಕಾಲೇಜುಗಳಲ್ಲಿ ವಿಷಯಗಳನ್ನು ಬೋಧಿಸುತ್ತಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 3503 ಹುದ್ದೆಗಳು ಖಾಲಿ ಇವೆ. ಈಗ 778 ಹುದ್ದೆಗಳನ್ನು ಭರ್ತಿಮಾಡಲು ಸರಕಾರ ನಿರ್ಧರಿಸಿದೆ. ಈ ಲೆಕ್ಕಚಾರದಲ್ಲಿ ಇನ್ನೂ ಕೂಡ 2225 ಹುದ್ದೆಗಳು ನೇಮಕಾತಿ ಪ್ರಕ್ರಿಯೆಗೆ ಬಾಕಿ ಉಳಿಯುತ್ತವೆ.
ವಿಷಯ, ಉಪನ್ಯಾಸಕ ಹುದ್ದೆಗಳ ಸಂಖ್ಯೆ:
ಒಟ್ಟು 10 ವಿಷಯಗಳ ಒಟ್ಟು 778 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರ ಬೀಳಲಿದೆ. ಕನ್ನಡ – 100, ಇಂಗ್ಲಿಷ್- 120, ಇತಿಹಾಸ-120, ಅರ್ಥಶಾಸ್ತ್ರ-180, ಭೂಗೋಳಶಾಸ್ತ್ರ-20, ವಾಣಿಜ್ಯಶಾಸ್ತ್ರ- 80, ಸಮಾಜಶಾಸ್ತ್ರ-75, ರಾಜ್ಯಶಾಸ್ತ್ರ-75, ಮನಃಶಾಸ್ತ್ರ-02, ಗಣಕ ವಿಜ್ಞಾನ -06
ವಿದ್ಯಾರ್ಹತೆ:
*ಉಪನ್ಯಾಸಕ ಹುದ್ದೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇಕಡ 55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
*ಎರಡು ವರ್ಷದ ಬಿ.ಇಡಿ ಎಜುಕೇಷನ್ ಪಡೆದಿರಬೇಕು.
ವಯೋಮಿತಿ ಅರ್ಹತೆಗಳು
*ಅರ್ಜಿ ಸಲ್ಲಿಸಲು ಕನಿಷ್ಠ 21ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ವರ್ಗಾವಾರು ಈ ಕೆಳಗಿನಂತಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ
ಕೆಟಗರಿ 2A, 2B, 3A, 3B ಅಭ್ಯರ್ಥಿಗಳಿಗೆ 43 ವರ್ಷ
ಎಸ್‌ಸಿ / ಎಸ್‌ಟಿ / ಕೆಟಗರಿ -1 ಅಭ್ಯರ್ಥಿಗಳಿಗೆ 45 – ವರ್ಷ.
