Home » Viral Video । ಈ ಮನೆಯ ಗೇಟು ಓಪನ್ ಮಾಡದೆಯೇ ಕಾರಿಂದ ಹೋಗಿ ಮನೆಯ ಅಂಗಳದಲ್ಲಿ ಇಳಿಯಬಹುದು – ಈ ವಿಶಿಷ್ಟ ‘ ಜುಗಾಡು ‘ ಗೇಟ್ ನೋಡಿ ಮುದಗೊಂಡ ಆನಂದ್ ಮಹೀಂದ್ರಾ !

Viral Video । ಈ ಮನೆಯ ಗೇಟು ಓಪನ್ ಮಾಡದೆಯೇ ಕಾರಿಂದ ಹೋಗಿ ಮನೆಯ ಅಂಗಳದಲ್ಲಿ ಇಳಿಯಬಹುದು – ಈ ವಿಶಿಷ್ಟ ‘ ಜುಗಾಡು ‘ ಗೇಟ್ ನೋಡಿ ಮುದಗೊಂಡ ಆನಂದ್ ಮಹೀಂದ್ರಾ !

0 comments

ಆನಂದ್ ಮಹೀಂದ್ರಾ ಅವರು ತಮ್ಮ ಪ್ರತಿಯೊಂದು ಟ್ವೀಟ್ ನಿಂದ ಸಮಾಜಕ್ಕೆ ಏನಾದರೂ ಒಂದು ಮಹತ್ವದ ಸಂದೇಶವನ್ನು ಅಥವಾ ತಮಾಷೆಯ ದೃಶ್ಯವನ್ನು ತೋರಿಸುವುದರಲ್ಲಿ ಅತ್ಯುತ್ಸಾಹಿ. ಅವರು ಇಂಟರ್ನೆಟ್ ನಲ್ಲಿ ಯಾವತ್ತೂ ಕ್ರಿಯಾಶೀಲರಾಗಿರುತ್ತಾರೆ. ಆನಂದ್ ಮಹೀಂದ್ರಾ ಅವರು ಈಗ ಶೇರ್ ಮಾಡಿರುವ ವಿಡಿಯೋ ನೋಡಿದಾಗ ಮೊದಲು ತುಂಬಾ ಕನ್ಫ್ಯೂಜನ್ ಆಗುತ್ತದೆ. ಏನಿದು ಎಂದು ಅರ್ಥ ಆಗೋದಿಲ್ಲ. ಆದರೆ, ಕ್ರಿಯೇಟಿವ್ ವ್ಯಕ್ತಿಯೊಬ್ಬ ತನ್ನ ಮನೆಗೆ ವಿಶಿಷ್ಟ ಗೇಟ್ ಅನ್ನು ತಯಾರಿಸಿದ್ದಾನೆ. ಅದರ ವಿಡಿಯೋ ಆನಂದ್ ಮಹೀಂದ್ರಾ ಅವರಿಗೆ ಮೊಟ್ಟಮೊದಲಿಗೆ ಸಿಕ್ಕಿದೆ, ಅದನ್ನವರು ಟ್ವಿಟ್ಟರ್ ನಲ್ಲಿ ಎಂದಿನ ಉತ್ಸಾಹದಿಂದ ಶೇರ್ ಮಾಡಿದ್ದಾರೆ.

ಈ ಮನೆಯ ಗೇಟು ಓಪನ್ ಮಾಡದೆಯೇ ಕಾರಿಂದ ಹೋಗಿ ಮನೆಯ ಅಂಗಳದಲ್ಲಿ ಇಳಿಯಬಹುದು – ಈ ವಿಶಿಷ್ಟ ‘ ಜುಗಾಡು ‘ ಗೇಟ್ ನೋಡಿ ಆನಂದ್ ಮಹೀಂದ್ರಾ ಅವರು ಮುದಗೊಂಡಿದ್ದಾರೆ ! ವೈರಲ್ ಆಗುತ್ತಿರುವ ಈ ವಿಡಿಯೋದ ದೃಶ್ಯವು ನೋಡಲು ವಿಶೇಷದ ಜೊತೆಗೆ ತುಂಬಾ ತಮಾಷೆಯಿಂದಲೂ ಕೂಡಿದೆ. ಈ ಗೇಟ್ ನ ಒಳಗಡೆ ಒಂದು ಆಲ್ಟೊ ಕಾರ್ ಮರ್ಜ್ ಆಗಿದೆ. ಆಲ್ಟೊ ಕಾರಿನ ಅರ್ಧಭಾಗವನ್ನು ಗೇಟ್ ನಲ್ಲಿಯೇ ಸೆಟ್ ಮಾಡಿಸಿದ್ದಾನೆ. ಯಾರೇ ಆಗಲಿ ಮೊದಲು ನೋಡಿದಾಗ ಕಾರನ್ನು ಗೇಟ್ ಮುಂದೆ ಪಾರ್ಕ್ ಮಾಡಿದ ಹಾಗೆ ಕಂಡು ಬರುತ್ತದೆ. ಕಾರಿನ ಬಾಗಿಲನ್ನೇ ಗೇಟಿನ ಡೋರ್ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದಾರೆ. ವ್ಯಕ್ತಿ ಹೊರಗೆ ಬರುವಾಗ ಕಾರಿನ ಡೋರ್ ಓಪನ್ ಮಾಡಿಯೇ ಹೊರಗೆ ಬರುತ್ತಾನೆ. ಈ ದೃಶ್ಯ ನೋಡಲು ನಿಜಕ್ಕೂ ವಿಶೇಷವಾಗಿದೆ !

ಈ ವಿಡಿಯೋವನ್ನು ಆನಂದ್ ಮಹಿಂದ್ರಾ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 50,000 ಹೆಚ್ಚು ಜನರು ನೋಡಿದ್ದಾರೆ. ಮತ್ತು ತರತರದ ಪ್ರಶ್ನೆಗಳನ್ನು ತಮ್ಮ ಪ್ರತಿಕ್ರಿಯೆಗಳಲ್ಲಿ ಮಹಿಂದ್ರಾದ ಒಡೆಯನಿಗೆ ಕಲಿಸುತ್ತಿದ್ದಾರೆ.

You may also like

Leave a Comment