ಎಲನ್ ಮಸ್ಕ್” ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಇಷ್ಟು ಸಂಪತ್ತಿರುವ ವ್ಯಕ್ತಿಯ ಮನೆಯವರು ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ ಎಂದು ಜನ ಭಾವಿಸುತ್ತಾರೆ. ಆದರೆ ವಾಸ್ತವ ಅದಲ್ಲ. ಮಗನನ್ನು ನೋಡಲು ಹೋದ ಎಲನ್ ಮಸ್ಕ್ ತಾಯಿ ಗ್ಯಾರೇಜ್ನಲ್ಲಿ ಮಲಗಿದ್ದರು. ಈ ವಿಷಯವನ್ನು ಸ್ವತಃ ಅವರೇ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. ಎಲನ್ ಮಸ್ಕ್ ಅವರ ತಾಯಿ ‘ಮಯೆ ಮಸ್ಕ್ ಟೆಕ್ಸಾಸ್ನಲ್ಲಿರುವ ಅವರ ನಿವಾಸಕ್ಕೆ ಹೋಗಿದ್ದರಂತೆ. ಆದರೆ ಸೂಕ್ತ ವಸತಿ ವ್ಯವಸ್ಥೆ ಇಲ್ಲದೆ ಅಲ್ಲಿನ ಸ್ಪೇಸ್ ಎಕ್ಸ್ ಕಚೇರಿಯ ಗ್ಯಾರೇಜ್ನಲ್ಲಿ ಮಲಗಿದೆ ಎಂದು ಮಯೆ ಮಸ್ಕ್ ಹೇಳಿದ್ದಾರೆ.
ಆ ಜಾಗದಲ್ಲಿ ಯಾವುದೇ ಐಷಾರಾಮಿ ಮನೆಗಳು ಇರಲಿಲ್ಲ ಎಂದು ತಿಳಿಸಿದ್ದಾರೆ. ಮಯೆ ಮಸ್ಯೆ ಕೂಡ ಅತ ಅಮೆರಿಕದಲ್ಲಿ ಜನಪ್ರಿಯ ರೂಪದರ್ಶಿ, ಮಾಯೆಗೆ ಮೂವರು ಮಕ್ಕಳಿದ್ದಾರೆ. ಎಲೆನ್, ಕಿಂದಾಲ್ ಮತ್ತು ಟೋಸ್ಟ್ರಾ .
ಆಕೆ ತನ್ನ ಪತಿ ಎರೋಲ್ ಮಸ್ಕ್ ನಿಂದ ವಿಚ್ಛೇದನ ಪಡೆದು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ. ಈ ಘಟನೆ ತನ್ನ ಜೀವನದಲ್ಲಿ ಅತ್ಯಂತ ಕಠಿಣವಾದದ್ದು ಎಂದು ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ಎಲನ್ ಮಸ್ಕ್ ನನಗೆ ಸ್ವಂತ ಮನೆಯೂ ಇಲ್ಲ. ಸದ್ಯ ಗೆಳೆಯನ ಮನೆಯಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದರು.
