Home » ಕಿರುತೆರೆ ನಟನ ಮೇಲೆ ಕಬ್ಬಿಣದ ರಾಡ್ ನಿಂದ ತೀವ್ರ ಹಲ್ಲೆ

ಕಿರುತೆರೆ ನಟನ ಮೇಲೆ ಕಬ್ಬಿಣದ ರಾಡ್ ನಿಂದ ತೀವ್ರ ಹಲ್ಲೆ

by Mallika
0 comments

ಜನಪ್ರಿಯ ಹಿಂದಿ ಕಿರುತೆರೆ ನಟ ಪುನಿತ್ ತಲ್ರೇಜಾ ಅವರಿಗೆ ಇಬ್ಬರು ವ್ಯಕ್ತಿಗಳು ತೀವ್ರವಾಗಿ ಥಳಿಸಿರುವ ಘಟನೆಜಯೊಂದು ನಡೆದಿದೆ. ಈ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

34 ವರ್ಷದ ತಲ್ರೇಜಾ ಭಾನುವಾರ ತಮ್ಮ ತಾಯಿಗೆ ಔಷಧಿಗಳನ್ನು ಖರೀದಿಸಿ ತಮ್ಮ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಅಂಬರನಾಥ್ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದೆ.

ತಲ್ರೇಜಾ ಹೋಗುತ್ತಿದ್ದ ಬೈಕ್‌ ಹಿಂದೆ ಮತ್ತೊಂದು ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಾರ್ನ್ ಮಾಡಿದ್ದಾರೆ. ಈ ವೇಳೆ ತಲ್ರೇಜಾ ಮುಂದೆ ಬಂದ ಆರೋಪಿಗಳು ದಾರಿ ನೀಡದಿದ್ದಕ್ಕಾಗಿ ನಿಂದಿಸಿ ಕಬ್ಬಿಣದ ರಾಡ್ ಮತ್ತು ಇತರ ಆಯುಧಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಂಬರನಾಥ್‌ನ ಶಿವಾಜಿ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ನಟನ ದೂರನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ತಲ್ರೇಜಾಗೆ ತೀವ್ರ ಗಾಯಗಗೊಂಡಿದ್ದನ್ನು ಕಂಡ ಕೆಲವು ದಾರಿಹೋಕರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ತಲ್ರೇಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

You may also like

Leave a Comment