ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಬಳಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಅಪಘಾತಗೊಂಡು, ಡಿಸಿಎಂ ಲಕ್ಷ್ಮಣ್ ಸವದಿ ಸೇರಿದಂತೆ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಅಪಘಾತವಾದ ರಭಸಕ್ಕೆ ಸಚಿವರು ಸೇರಿದಂತೆ ಕಾರಿನಲ್ಲಿದ್ದ ಎಲ್ಲರೂ ಕಾರಿನೊಳಗೆ ಲಾಕ್ ಆಗಿದ್ದರು. ಅಡ್ಡಬಂದ ಬೈಕ್ ತಪ್ಪಿಸೋದಕ್ಕೆ ಹೋಗಿ ಕಾರು ನಿಯಂತ್ರಣತಪ್ಪಿ ಪಲ್ಟಿಯಾಗಿದ್ದು ಕಾರು ಪಲ್ಟಿಯಾಗಿತ್ತು.
ಕಾರು ಅಪಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಸಹಾಯಕ್ಕಾಗಿ ಸ್ಥಳೀಯರು ಆಗಮಿಸಿ, ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನು ಕಾರಿನಿಂದ ಹೊರ ತೆಗೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.