Home » ಅಣ್ಣನನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ತಮ್ಮ!

ಅಣ್ಣನನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ತಮ್ಮ!

0 comments

ಕುಡಿತದ ಚಟ ಹೊಂದಿದ್ದ ಅಣ್ಣನ ಕಾಟ ತಡೆಯಲಾಗದೆ ತಮ್ಮನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಹತ್ಯೆಯಾಗಿರುವ ಯುವಕ ಜಗ್ಗೇಶ್.

ಕುಡಿಯಲು ಹಣ ಕೇಳಿ ಕಾಟ ಕೊಡುತ್ತಿದ್ದ ಅಣ್ಣ ಜಗ್ಗೇಶನ ಕಾಟಕ್ಕೆ ರೋಸಿಹೋಗಿದ್ದ ತಮ್ಮ ರಾಹುಲ್ ಹರಿತವಾದ ಆಯುಧದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ‌. ಇಂತಹದೊಂದು ಘಟನೆ ವಿಜಯಪುರ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದೆ.

ಈ ಮೂಲಕ ಭೀಮಾತೀರ ಖ್ಯಾತಿಯ ಚಡಚಣ ತಾಲೂಕು ಮತ್ತೆ ಮರ್ಡರ್ ಗೆ ಸುದ್ದಿಯಾಗಿದ್ದು, ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

You may also like

Leave a Comment