Home » ಇಂದು ಕೈ ಪಾಳಯದಿಂದ ಮಹತ್ವದ ಸುದ್ದಿಗೋಷ್ಠಿ!! ಬಿಡುಗಡೆಯಾಗಲಿದೆ ಬಿಜೆಪಿ ಶಾಸಕರೊಬ್ಬರ ವಿಡಿಯೋ!!??

ಇಂದು ಕೈ ಪಾಳಯದಿಂದ ಮಹತ್ವದ ಸುದ್ದಿಗೋಷ್ಠಿ!! ಬಿಡುಗಡೆಯಾಗಲಿದೆ ಬಿಜೆಪಿ ಶಾಸಕರೊಬ್ಬರ ವಿಡಿಯೋ!!??

0 comments

ಬೆಂಗಳೂರು: ಬಿಜೆಪಿಯ ಜನಸ್ಪಂದನ, ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಈಗಾಗಲೇ ಭಾರೀ ಸದ್ದು ಮಾಡಿದ್ದು, ಈ ನಡುವೆ ರಾಜ್ಯ ಕಾಂಗ್ರೆಸ್ ನಾಯಕರ ಬಳಗ ಸುದ್ದಿಗೋಷ್ಠಿ ಕರೆದಿದ್ದು, ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಶಾಸಕರೊಬ್ಬರ ವಿಡಿಯೋ ಒಂದು ಬಹಿರಂಗವಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ.

ರಾಜ್ಯ ಸಹಿತ ದೇಶಾದ್ಯಂತ ಸುದ್ದಿಮಾಡಿದ ಪೊಲೀಸ್ ಇಲಾಖೆಯ ಪಿ.ಎಸ್.ಐ ಪರೀಕ್ಷಾ ಅಕ್ರಮದ ಬಗ್ಗೆ ಈ ಸುದ್ದಿಗೋಷ್ಠಿ ನಡೆಯಲಿದ್ದು, ಈ ಸಂದರ್ಭ ಬಿಜೆಪಿ ಶಾಸಕರ ವಿಡಿಯೋ ಬಿಡುಗಡೆ ಮಾಡುವ ಬಗ್ಗೆ ನಾಯಕರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಧ್ಯಾಹ್ನ ಸುಮಾರು 12:30 ಕ್ಕೆ ಸುದ್ದಿಗೋಷ್ಠಿ ಕರೆಯಲಾಗಿದ್ದು, ಬಿಜೆಪಿಯ ಶಾಸಕರ ವಿಡಿಯೋ ಬಿಡುಗಡೆಗೊಂಡರೆ ಬಿಜೆಪಿ ಪಾಳಯದಲ್ಲಿ ಬಿರುಗಾಳಿ ಏಳುವುದಂತೂ ಖಚಿತ ಎನ್ನಲಾಗಿದೆ.

You may also like

Leave a Comment