Home » Bigg Boss ಟಿವಿ ಸೀಸನ್ ಗೆ ಕೆಲವೇ ದಿನ ಬಾಕಿ | ಈ ಬಾರಿ Bigg Boss ಕೂಡಾ ಆಟ ಆಡ್ತಾರೆ !!! ಹೊಸ ಟ್ವಿಸ್ಟ್

Bigg Boss ಟಿವಿ ಸೀಸನ್ ಗೆ ಕೆಲವೇ ದಿನ ಬಾಕಿ | ಈ ಬಾರಿ Bigg Boss ಕೂಡಾ ಆಟ ಆಡ್ತಾರೆ !!! ಹೊಸ ಟ್ವಿಸ್ಟ್

by Mallika
0 comments

ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ‘ಹಿಂದಿ ಬಿಗ್ ಬಾಸ್ ಸೀಸನ್ 16’ರ ಪ್ರೋಮೋಗಳು ಬಂದಿದ್ದವು. ಈಗ ಅದರ ಇನ್ನೊಂದು ವಿಚಾರ ಬೆಳಕಿಗೆ ಬಂದಿದ್ದು, ಬಿಗ್ ಬಾಸ್ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ ಎಂದೇ ಹೇಳಬಹುದು.

ಕೊವಿಡ್ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಈ ಕಾರಣಕ್ಕೆ ಚಿತ್ರರಂಗ ಹಾಗೂ ಕಿರುತೆರೆಗೆ ಹೊಸತನ ಬಂದಿದೆ. ದೊಡ್ಡ ದೊಡ್ಡ ಬಜೆಟ್‌ನ ಸಿನಿಮಾಗಳು ರಿಲೀಸ್ ಆಗಿದೆ. ಈಗ ಕಿರುತೆರೆಯ ರಿಯಾಲಿಟಿ ಶೋಗಳ ಸಮಯ. ಹಾಗಾಗಿಯೇ, ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಬಿಗ್ ಬಾಸ್’ (Bigg Boss) ಬೇರೆಬೇರೆ ಭಾಷೆಗಳಲ್ಲಿ ಆರಂಭ ಆಗುತ್ತಿದೆ. ಕನ್ನಡದ ಟಿವಿ ಸೀಸನ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ‘ಹಿಂದಿ ಬಿಗ್ ಬಾಸ್ 16’ನ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಬಾರಿ ಕೂಡಾ ಸಲ್ಮಾನ್ ಶೋ ನಡೆಸಿಕೊಡಲಿದ್ದಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಈ ಶೋಗೆ ದೊಡ್ಡ ಟ್ವಿಸ್ಟ್ ಕೂಡ ಇದೆ. ಅದೇನೆಂದರೆ, ‘ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡಲಿದ್ದಾರೆ’ ಎಂಬ ಲೈನ್ ಪ್ರೋಮೋದಲ್ಲಿ ಹೈಲೈಟ್ ಆಗಿದೆ.

ಸಲ್ಮಾನ್ ಖಾನ್ ಇರುವ ಪ್ರೋಮೋವನ್ನು ಕಲರ್ಸ್ ಟಿವಿ ಹಂಚಿಕೊಂಡಿದೆ. ’15 ವರ್ಷಗಳಲ್ಲಿ ಎಲ್ಲರೂ ತಮ್ಮತಮ್ಮ ಆಟ ಆಡಿದ್ದಾರೆ. ಆದರೆ, ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡುತ್ತಾರೆ’ ಎಂದು ಕ್ಯಾಪ್ಶನ್ ನೀಡಲಾಗಿದೆ. ಇದು ಏನು ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಈ ಬಾರಿ ಬಿಗ್ ಬಾಸ್ ಹೊಸ ರೀತಿಯಲ್ಲಿ ಮೂಡಿ ಬರಲಿದೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಕೂಡ ಆಟ ಆಡುತ್ತಾರೆ ಎನ್ನುವ ಲೈನ್‌ನ ನಿಜವಾದ ಅರ್ಥ ತಿಳಿಯಲು ಬಿಗ್ ಬಾಸ್ ಪ್ರಿಯರು ಬಹಳ ಉತ್ಸುಕರಾಗಿದ್ದಾರೆ.

https://twitter.com/ColorsTV/status/1568996798404136961?ref_src=twsrc%5Etfw%7Ctwcamp%5Etweetembed%7Ctwterm%5E1568996798404136961%7Ctwgr%5E7f1cd6cf59e2f2421e14547f2b808fff84d93efb%7Ctwcon%5Es1_c10&ref_url=https%3A%2F%2Ftv9kannada.com%2Fentertainment%2Ftelevision%2Fhindi-bigg-boss-season-16-salman-khan-shared-new-promo-this-time-bigg-boss-will-also-play-rmd-au34-440904.html

You may also like

Leave a Comment