Home » ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬರೀ ಒಂದೇ ತಿಂಗಳಲ್ಲಿ 664 ಕೋಟಿ ರೂ.ಗಳಿಸಿದ ವಿದ್ಯಾರ್ಥಿ!

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬರೀ ಒಂದೇ ತಿಂಗಳಲ್ಲಿ 664 ಕೋಟಿ ರೂ.ಗಳಿಸಿದ ವಿದ್ಯಾರ್ಥಿ!

0 comments

ಅದೃಷ್ಟ ಎಂಬುದು ಎಲ್ಲಿ ಹೇಗೆ ಖುಲಾಯಿಸುತ್ತದೆ ಎಂದು ಹೇಳಲು ಅಸಾಧ್ಯ. ಅದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದೆ ಈ ಘಟನೆ. ಹೌದು. ವಿದ್ಯಾರ್ಥಿಯೊಬ್ಬ ಷೇರು ಮಾರುಕಟ್ಟೆಯಲ್ಲಿ 215 ಕೋಟಿ ರೂ. ಹೂಡಿಕೆ ಮಾಡಿ ಬರೀ ಒಂದು ತಿಂಗಳಲ್ಲಿ 664 ಕೋಟಿ ರೂ. ಗಳಿಸಿದ್ದಾನೆ.

ಷೇರು ಮಾರುಕಟ್ಟೆ ಕೆಲವೊಂದಷ್ಟು ಜನರ ಕೈ ಹಿಡಿದರೆ, ಇನ್ನೂ ಕೆಲವರು ನಷ್ಟಕ್ಕೆ ಒಳಗಾಗುತ್ತಾರೆ. ಹೀಗಾಗಿ, ವಿದ್ಯಾರ್ಥಿಗಳು ಕೂಡ ಹೂಡಿಕೆ ಮಾಡುತ್ತಾರೆ. ಹಾಗೆಯೇ ಸೌತ್ ಕ್ಯಾಲಿಫೋರ್ನಿಯಾ (South California) ವಿಶ್ವವಿದ್ಯಾಲಯದ (University) 21 ವರ್ಷದ ವಿದ್ಯಾರ್ಥಿ ಜಾಕೆ ಫ್ರೀಮ್ಯಾನ್ (Jake Freeman)ಷೇರು ಮಾರುಕಟ್ಟೆಯಲ್ಲಿ 215 ಕೋಟಿ ರೂ. ಹೂಡಿಕೆ ಮಾಡಿ ಬರೀ ಒಂದು ತಿಂಗಳಲ್ಲಿ 664 ಕೋಟಿ ರೂ. ಗಳಿಸಿದ್ದಾನೆ.

ಬೆಡ್ ಬಾತ್ ಆಂಡ್ ಬಿಯಾಂಡ್ ಕಂಪನಿಯ (Bed Bath and Beyond company) ಷೇರುಗಳನ್ನು (Shares) ಖರೀದಿಸಿ, ಈ ಷೇರುಗಳ ಮೂಲಕ ಅವರು ಕೇವಲ ಒಂದೇ ತಿಂಗಳಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ. ಇದ್ರಿಂದ ಅವರು ಅಂದಾಜು 878 ಕೋಟಿ ರೂ. ಗಳಿಸಿದ್ದಾರೆ. ಅಂದರೆ ಜಾಕೆ ಫ್ರೀಮ್ಯಾನ್ ಕೇವಲ ಒಂದು ತಿಂಗಳಲ್ಲಿ 664 ಕೋಟಿ ರೂ. ಲಾಭ ಗಳಿಸಿದ್ದಾರೆ.

ಈ ವಿದ್ಯಾರ್ಥಿ ಬೆಡ್ ಬಾತ್ ಆಂಡ್ ಬಿಯಾಂಡ್ ಕಂಪನಿಯ 50 ಲಕ್ಷ ಷೇರುಗಳನ್ನು (Shares)ಜುಲೈನಲ್ಲಿ ಖರೀದಿಸಿದ್ದ. ಈತ ಪ್ರತಿ ಷೇರಿಗೆ 440ರೂ. ನೀಡಿ ಖರೀದಿಸಿದ್ದ. ಕೇವಲ ಒಂದು ತಿಂಗಳ ಬಳಿಕ ಜಾಕೆ ಈ ಷೇರುಗಳನ್ನು ಮಾರಾಟ ಮಾಡುವಾಗ ಪ್ರತಿ ಷೇರಿನ ಮೌಲ್ಯ 2,160ರೂ. ಆಗಿತ್ತು. ಜಾಕೆ ಈ ಷೇರುಗಳನ್ನು ಖರೀದಿಸಲು ತನ್ನ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಂದ ಹಣ ಸಾಲ ಪಡೆದಿದ್ದರು.

ಹೀಗೆ ಒಟ್ಟುಗೂಡಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು. ತನ್ನ ಮಾಮಾನೊಂದಿಗೆ ಚರ್ಚಿಸಿ ಈ ಷೇರುಗಳ ಮೇಲೆ 200 ಕೋಟಿ ರೂ. ಹೂಡಿಕೆ ಮಾಡಿದ್ದರು. ಆದರೆ, ತಾನು ಇಷ್ಟೊಂದು ದೊಡ್ಡ ಮೊತ್ತದ ಲಾಭವನ್ನು ನಿರೀಕ್ಷಿಸಿರಲಿಲ್ಲ ಎಂದು ಜಾಕೆ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment