Home » Omicron BA 4.6 : ಮಹಾಮಾರಿ ಓಮಿಕ್ರಾನ್ ರೂಪಾಂತರಿ ಮತ್ತೆ ಪತ್ತೆ | ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿ

Omicron BA 4.6 : ಮಹಾಮಾರಿ ಓಮಿಕ್ರಾನ್ ರೂಪಾಂತರಿ ಮತ್ತೆ ಪತ್ತೆ | ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿ

0 comments

ವಿಶ್ವಾದ್ಯಂತ ಭಯ ಸೃಷ್ಟಿಸಿದ ಕೊರೋನಾ ಮಹಾಮಾರಿ ಈಗಷ್ಟೇ ಕಡಿಮೆಯಾಗಿದೆ ಎಂಬ ನೆಮ್ಮದಿಯಲ್ಲಿರುವಾಗಲೆ, ಮತ್ತೊಂದು ಆತಂಕ ಶುರುವಾಗಿದೆ. ಓಮಿಕ್ರಾನ್ ರೂಪಾಂತರಿ BA.4.6 ಆಗಮನವಾಗಿ ಜನಮಾನಸದಲ್ಲಿ ಭಯದ ವಾತಾವರಣ ಹುಟ್ಟುಹಾಕಿದೆ.

US ನಲ್ಲಿ ಓಮಿಕ್ರಾನ್​ನ ಹೊಸ ಉಪ-ರೂಪಾಂತರ BA.4.6 ವೇಗವಾಗಿ ಹರಡುತ್ತಿದ್ದು, ಬ್ರಿಟನ್ ನಲ್ಲಿ ಕೂಡ ಅಪಾಯದ ಮುನ್ಸೂಚನೆ ನೀಡಿದೆ. ಕಳೆದೆರಡು ವರ್ಷಗಳಿಂದ ಜನರ ನಿದ್ದೆಗೆಡಿಸಿದ ಕೊರೋನ ದಿಂದ ಅನೇಕ ಸಾವು – ನೋವು ಸಂಭವಿಸಿ, ಆತಂಕದಲ್ಲೇ ದಿನದೂಡಿದನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ. ಮೊದಲಿಗಿಂತ ಕೊರೊನಾ ಪ್ರಕರಣಗಳಲ್ಲಿ ಕುಸಿತವೂ ಕಂಡುಬಂದಿದ್ದರೂ ಹೊಸ ರೂಪಾಂತರವು ಹೇಗೆ ಪ್ರಭಾವ ಬೀರಲಿದೆ ಎಂಬ ಆತಂಕವೂ ಕಾಡತೊಡಗಿದೆ .

Omicron ನ ಮತ್ತೊಂದು ಉಪ-ರೂಪಾಂತರ BA.4.6 ನ ಹೊಸ ಪ್ರಕರಣಗಳು UK ಮತ್ತು US ನಲ್ಲಿ ವರದಿಯಾಗಿದೆ. ಮೊನ್ನೆ ಓಮಿಕ್ರಾನ್​ನ BA.4 ಹೊರಬಂದಿದ್ದು ಅದು ದಕ್ಷಿಣ ಆಫ್ರಿಕಾದಿಂದ ಹರಡಿದೆ .

ಒಮ್ರಿಕಾನ್ ಪ್ರಕರಣವು,ವಒಬ್ಬ ವ್ಯಕ್ತಿಯು ಕೊರೊನಾದ ಎರಡು ವಿಭಿನ್ನ ಉಪ-ರೂಪಾಂತರಗಳಿಗೆ ಒಳಗಾದಾಗ ಇದು ಸಂಭವಿಸುತ್ತದೆ. ಹಾಗಾಗಿ ಇದನ್ನು ರಿಕಾಂಬಿನೆಂಟ್ ವೆರಿಯಂಟ್ ಎಂದೂ ಕರೆಯಲಾಗುತ್ತಿದೆ. BA.4.6 ಉಪ-ರೂಪಾಂತರಿಯು BA.4 ಗಿಂತ ಹೆಚ್ಚು ವ್ಯತ್ಯಾಸಗಳಿಲ್ಲ ಅಲ್ಲದೇ ಸ್ಪೈಕ್ ಪ್ರೋಟೀನ್‌ನಲ್ಲಿ ರೂಪಾಂತರವನ್ನು ಹೊಂದಿದೆ. ಈ ರೂಪಾಂತರವನ್ನು R346T ಎಂದು ಕರೆಯಲಾಗುತ್ತದೆ.

BA.4.6 ಓಮಿಕ್ರಾನ್‌ನ ಉಪ ರೂಪಾಂತರಿ BA.4 ರೂಪಾಂತರಿಯ ಕುಟುಂಬಕ್ಕೆ ಸೇರಿದೆ. BA.4 ಅನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಜನವರಿ 2022 ರಲ್ಲಿ ಪತ್ತೆಹಚ್ಚಲಾಗಿತ್ತು ಮತ್ತು ಅಂದಿನಿಂದ BA.5 ರೂಪಾಂತರಿ ವಿಶ್ವಾದ್ಯಂತ ಹರಡಿದೆ.
ಕೊರೋನದ ಪ್ರಭಾವ ತಗ್ಗಿಸಲು ಲಸಿಕೆಗಳನ್ನು ಪಡೆದು, ರೋಗದ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಲು ವೈದ್ಯರು ಸ ಲಹೆ ನೀಡಿದ್ದು ತಿಳಿದಿರುವ ವಿಚಾರ.

ಈ ಹೊಸ ರೂಪಾಂತರಗಳು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೂಲಕ BA.4.6 ಅನ್ನು ದೇಹಕ್ಕೆ ಪ್ರವೇಶಿಸಲು ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಲಸಿಕೆ ಪಡೆದ ಜನರಿಗೂ ರೂಪಾಂತರದಿಂದ ಅಪಾಯವಾಗುವ ಸಾಧ್ಯತೆ ಇದೆ. ದೇಹವು BA.4 ಮತ್ತು BA.5 ಗಿಂತ BA.4.6 ಗೆ ಹೆಚ್ಚು ಪ್ರತಿಕಾಯಗಳನ್ನು ಹೊಂದಿರುತ್ತದೆ.

ಇತ್ತೀಚೆಗೆ ಅಮೆರಿಕಾದಲ್ಲಿ ವರದಿಯಾಗಿರುವ ಕೊರೊನಾ ಪ್ರಕರಣಗಳಲ್ಲಿ ಒಮಿಕ್ರಾನ್ ನ ಹೊಸ ರೂಪಾಂತರಿಯಾಗಿರುವ BA.4.6 ಪ್ರಕರಣಗಳು ಶೇ.9 ಕ್ಕಿಂತ ಹೆಚ್ಚಾಗಿವೆ ಎಂದು ತಿಳಿದುಬಂದಿದೆ. ಜನರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಅವಶ್ಯ.

You may also like

Leave a Comment