4
ಕೊಡಗು ಜಿಲ್ಲೆಯ ವಿಷಯಗಳನ್ನು ಕೇಳುವುದೇ ಒಂದು ರೀತಿಯ ಚೆಂದ. ಅಲ್ಲಿನ ಸುಂದರವಾದಂತಹ ಪರಿಸರ ಮತ್ತು ಆಗು ಹೋಗುಗಳ ಘಟನೆಗಳನ್ನು ಕೇಳುವುದೇ ಸುಂದರ. ಆದರೆ ಇಲ್ಲೊಂದು ವಿಷಯ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಇದನ್ನ ಕೇಳುತ್ತಲೇ ಮೈ ನಡುಗುತ್ತದೆ.
ಹೌದು. ಕೊಡಗು ಜಿಲ್ಲೆಯ ಮಹಿಳೆ ಒಬ್ಬಳಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣವೊಂದು ನಡೆದಿದೆ. ಸೋಮವಾರ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಶಾಹೀರಾ (43) ಕೊಲೆಗೀಡಾದ ಮಹಿಳೆ. ಬೊಳ್ಳು ಎಂಬ ಅಡ್ಡ ಹೆಸರು ಇರುವ ಪೂವಯ್ಯ (42) ಎಂಬಾತನು ಕೊಲೆಯ ಆರೋಪಿ.
ಶಾಹೀರಾ ಮತ್ತು ಪೂವಯ್ಯ ಪರಿಚಯದ ವ್ಯಕ್ತಿಗಳು. ಕೊಲೆಯ ಹಿಂದೆ ಇರುವ ರಹಸ್ಯ ಇನ್ನು ತಿಳಿದು ಬಂದಿಲ್ಲ. ಆದರೆ ಶಾಹಿರಾ ಮನೆಯಲ್ಲಿ ಒಬ್ಬಾತ ಇದ್ದ ಕಾರಣದಿಂದ ಈ ಕೊಲೆ ಆಗಿದೆ ಎಂಬ ಗಾಳಿ ಸುದ್ದಿ ದೊರೆತಿದೆ. ಸೋಮವಾರ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
