Home » ಗೊತ್ತೇ ಇಲ್ಲದೆ ವ್ಯಕ್ತಿಯ ಖಾತೆಗೆ ಜಮೆ ಆಯ್ತು ಹಣ | ಖುಷಿಯಾಗಿದ್ದ ಆತನ ಸಂಭ್ರಮವೂ ಅಂದೇ ಕೊನೆಯಾಯಿತು!

ಗೊತ್ತೇ ಇಲ್ಲದೆ ವ್ಯಕ್ತಿಯ ಖಾತೆಗೆ ಜಮೆ ಆಯ್ತು ಹಣ | ಖುಷಿಯಾಗಿದ್ದ ಆತನ ಸಂಭ್ರಮವೂ ಅಂದೇ ಕೊನೆಯಾಯಿತು!

0 comments

ಒಮ್ಮೆಗೆ ನಮ್ಮ ಖಾತೆಗೆ ಹಣ ಬಂದ್ರೆ ಯಾರಿಗೆ ತಾನೇ ಖುಷಿ ಆಗಲ್ಲ ಹೇಳಿ. ಅದರಂತೆ ಗುಜರಾತ್ ವ್ಯಕ್ತಿಯೊಬ್ಬನಿಗೆ ಆತನಿಗೆ ಗೊತ್ತೇ ಇಲ್ಲದಂತೆ ಖಾತೆಗೆ 11,677 ಕೋಟಿ ರೂ. ಜಮಾ ಮಾಡಲಾಗಿದೆ. ಆದ್ರೆ, ಒಂದು ದಿನಕ್ಕೆ ಕೋಟ್ಯಾಧಿಪತಿಯಾಗಿದ್ದ ಆತನ ಸಂತೋಷ ಅಂದೇ ಮರೆಯಾಗಿದೆ.

ಕಳೆದ ಐದಾರು ವರ್ಷಗಳಿಂದ ರಮೇಶ್ ಸಾಗರ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಅವರು ಕೋಟಾಕ್ ಸೆಕ್ಯುರಿಟೀಸ್‌ ನಲ್ಲಿ ತಮ್ಮ ಡಿಮ್ಯಾಟ್ ಖಾತೆ ತೆರೆದಿದ್ದರು. ಒಂದು ತಿಂಗಳ ಹಿಂದೆ ಸಾಗರ್ ಖಾತೆಯಲ್ಲಿ 116,77,24,43,277.10 ರೂ. ಜಮಾ ಆಗಿರುವುದು ಗೊತ್ತಾಗಿ ಆತನಿಗೆ ಆಘಾತವಾಗಿತ್ತು. ಎಂಟು ಗಂಟೆಗಳಿಗೂ ಹೆಚ್ಚು ಕಾಲ ಅವರ ಖಾತೆಯಲ್ಲಿ ಹಣ ಇತ್ತು. ಆದರೆ, ಆ ಸಂತೋಷ ಹೆಚ್ಚು ಒತ್ತು ಇರಲಿಲ್ಲ.

ಯಾಕೆಂದರೆ, ರಮೇಶ್ ಸಾಗರ್ ಎಂಬಾತನ ಡಿಮ್ಯಾಟ್ ಖಾತೆಯಲ್ಲಿ 11,677 ಕೋಟಿ ರೂ.(116,77,24,43,277.10) ಜಮಾ ಆದ ಕೆಲವೇ ಗಂಟೆಗಳಲ್ಲಿ ಭಾರಿ ಮೊತ್ತದ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ಇದರಿಂದಾಗಿ ಆತನ ಸಂತೋಷ ಅಲ್ಪಕಾಲಿಕವಾಗಿತ್ತು.

ಜುಲೈ 26, 2022 ರಂದು, ನಾನು ನನ್ನ ಖಾತೆಯಲ್ಲಿ 116,77,24,43,277.10 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದ್ದೇನೆ. ಅದರಲ್ಲಿ ನಾನು ಎರಡು ಕೋಟಿ ರೂಪಾಯಿಗಳನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೇನೆ. ಐದು ಲಕ್ಷ ರೂಪಾಯಿಗಳ ಲಾಭವನ್ನು ಕಾಯ್ದಿರಿಸಿದ್ದೇನೆ. ಅದೇ ಸಂಜೆ ಸುಮಾರು 8 ರಿಂದ 8.30 ರವರೆಗೆ ಬ್ಯಾಂಕ್ ಮೊತ್ತವನ್ನು ಹಿಂತೆಗೆದುಕೊಂಡಿತು. ಬ್ಯಾಂಕ್‌ ನಿಂದ ಹಣ ಜಮಾ ಆದ ಅಧಿಸೂಚನೆ ಸ್ವೀಕರಿಸಿದ್ದಾಗಿ ಅವರು ತಿಳಿಸಿದ್ದಾರೆ. ತಾಂತ್ರಿಕ ದೋಷ ಇಲ್ಲವೇ ಸಿಬ್ಬಂದಿ ಎಡವಟ್ಟಿನಿಂದ ಈ ರೀತಿ ಆಗಿರಬಹುದು ಎಂದು ಹೇಳಲಾಗಿದೆ.

You may also like

Leave a Comment