Home » ಮಹಿಳೆಯರೇ ಸೀರೆ ಉಟ್ಕೊಳ್ಳಿ ಓಟ ಶುರು ಹಚ್ಕೊಳ್ಳಿ | ವೈಯಕ್ತಿಕ ಫಿಟ್ನೆಸ್ ಗಾಗಿ ಇಂದು ‘ ಸಾರಿ ರನ್ ‘ ಕಾರ್ಯಕ್ರಮ

ಮಹಿಳೆಯರೇ ಸೀರೆ ಉಟ್ಕೊಳ್ಳಿ ಓಟ ಶುರು ಹಚ್ಕೊಳ್ಳಿ | ವೈಯಕ್ತಿಕ ಫಿಟ್ನೆಸ್ ಗಾಗಿ ಇಂದು ‘ ಸಾರಿ ರನ್ ‘ ಕಾರ್ಯಕ್ರಮ

0 comments

ಮಹಿಳೆಯರು ತಮ್ಮ ತಮ್ಮ ವೈಯಕ್ತಿಕ ಫಿಟ್ನೆಸ್ ಬಗ್ಗೆ ಗಮನಹರಿಸಲು ಜಯನಗರ ಜಾಗ್ವಾರ್ಸ್ ಇಂದು ಭಾನುವಾರ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ಐದನೇ “ಸಾರಿ ರನ್‌(ಸೀರೆ ಓಟದ ಸ್ಪರ್ಧೆ)’ ಆಯೋಜಿಸಿದೆ. ಬದುಕಿನಲ್ಲಿ ರೆಸ್ಟ್ ಇಲ್ಲದೆ ಕೆಲಸ ಮಾಡುವವರಲ್ಲಿ ಮಹಿಳೆಯರೇ ಮುಂದು. ಆದರೂ ಕೆಲವರು ವೈಯಕ್ತಿಕ ವಿಜ್ಞೇಶ ಇಲ್ಲದೆ ಆರೋಗ್ಯ ಹಾಳು ಮಾಡಿಕೊಳ್ಳಬಹುದು. ಅದಕ್ಕಾಗಿ ಜಾಗೃತಿ ಮೂಡಿಸಲು ‘ ಸಾರಿ ರನ್ ‘ ಕಾರ್ಯಕ್ರಮ.

ನಾಳೆ ಬೆಳಗ್ಗೆ  6.30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಸಾರಿ ರನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಅವರಿಗೆ ಅದಮ್ಯ ಚೇತನ ಫೌಂಡೇಶನ್‌ನ ಅಧ್ಯಕ್ಷೆ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮತ್ತು ಎಸಿಪಿ ಶಶಿಕಲಾ ಅವರು ಸಾಥ್ ನೀಡಿದ್ದಾರೆ ಎಂದು ಜಯನಗರ ಜಾಗ್ವಾರ್ಸ್ ತಿಳಿಸಿದೆ

ಸುಮಾರು 2300ಕ್ಕೂ ಹೆಚ್ಚು ಮಹಿಳೆಯರು ಈ ಸೀರೆ ಓಟ ಅಥವಾ ಸಾರಿ ರನ್ ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಯನಗರ ಜಾಗ್ವಾರ್ಸ್ ನಿನ್ನೆ ಹೇಳಿತ್ತು.

ನಾವು ಕಳೆದ 7 ವರ್ಷಗಳಿಂದ ಈ ಸಾರಿ ರನ್ ಆಯೋಜಿಸುತ್ತಿದ್ದೇವೆ. ಕಾರಣಾಂತರಗಳಿಂದ 2 ವರ್ಷ ಆಯೋಜನೆ ಮಾಡಲಾಗಲಿಲ್ಲ. ಈ ಓಟ ಮಹಿಳೆಯರಿಗೆ ಫಿಟ್‌ನೆಸ್ ಬಗ್ಗೆ ಅರಿವು ಮೂಡಿಸುತ್ತದೆ ಎಂದು ನಮಗೆ ಖಚಿತವಾಗಿದೆ. ಸಮಾಜದ ಎಲ್ಲಾ ವರ್ಗದ ಮಹಿಳೆಯರು, ಮನೆಕೆಲಸ ಮಾಡುವವರಿಂದ ಹಿಡಿದು ಸಿಇಒಗಳು ಮತ್ತು ವೈದ್ಯರು, ಪೊಲೀಸ್ ಅಧಿಕಾರಿಗಳು, ಚಲನಚಿತ್ರ ನಟರಂತಹ ವೃತ್ತಿಪರರು ಈ ಸೀರೆ ರನ್‌ ನಲ್ಲಿ ಭಾಗವಹಿಸುತ್ತಾರೆ ಎಂದು ಜಯನಗರ ಜಾಗ್ವಾರ್ಸ್ ತಿಳಿಸಿದೆ.

You may also like

Leave a Comment