Home » ನಾನು ಬಾಲಿವುಡ್ ಗೆ ಎಂಟ್ರಿ ನೀಡಲು ಇವರೇ ಕಾರಣ – ಗುಟ್ಟು ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ

ನಾನು ಬಾಲಿವುಡ್ ಗೆ ಎಂಟ್ರಿ ನೀಡಲು ಇವರೇ ಕಾರಣ – ಗುಟ್ಟು ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ

by Mallika
0 comments

ನಟಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್, ಬಾಲಿವುಡ್‌ಗಳಲ್ಲಿ ಬಹು ಬೇಡಿಕೆಯಲ್ಲಿದ್ದಾರೆ. ತನ್ನ ಮುಗ್ಧ ನಟನೆಯಿಂದ ಎಲ್ಲರ ಮನಸೆಳೆದ ಈ ನಟಿ, ಕಿರಿಕ್ ಬೆಡಗಿ ಕನ್ನಡದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಮೊದಲು ಕಾಣಿಸಿಕೊಂಡಿದ್ದು, ನಂತರ ಹಿಂತಿರುಗಿ ನೋಡಿಲ್ಲ. ಈಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ತಾವು ಬಾಲಿವುಡ್‌ಗೆ ಕಾಲಿಡಲು ಕಾರಣರಾರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಹೌದು ಹಲವಾರು ಚಿತ್ರಗಳಲ್ಲಿ ನಟಿಸಿ, ಈಗ ದೇಶಾದ್ಯಂತ ಮನೆಮಾತಾಗಿರುವ ಕೊಡಗಿನ ಚೆಲುವೆ ಸದ್ಯ ಬಿಗ್ ಬಿ ಅಮಿತಾಭ್ ಬಚ್ಚನ್‌ರೊಂದಿಗೆ ನಟಿಸಿರುವ “ಗುಡ್ ಬೈ’ ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ರಹಸ್ಯವೊಂದನ್ನು ಹೇಳಿದ್ದಾರೆ. ಬಾಲಿವುಡ್‌ಗೆ ಬರಲು ಕಾರಣ ಯಾರೆಂಬುದನ್ನು ಹೇಳಿಕೊಂಡಿದ್ದಾರೆ ರಶ್ಮಿಕಾ.

ಇತ್ತೀಚೆಗೆ ಪತ್ರಕರ್ತರ ಜೊತೆ ಮಾತನಾಡುತ್ತಾ ಬಾಲಿವುಡ್ ಸಿನಿಮಾ ರಂಗಕ್ಕೆ ತಾನು ಎಂಟ್ರಿ ಕೊಡಲು ಪ್ರೇಕ್ಷಕರೇ ಕಾರಣ ಎಂದಿದ್ದಾರೆ. ಪ್ರೇಕ್ಷಕರಿಗೆ ನಾನು ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯಿತ್ತು. ಬಾಲಿವುಡ್ ಸಿನಿಮಾದಲ್ಲಿ ನನ್ನ ನಟನೆ ನೋಡುವುದು ಅವರಿಗೂ ಇಷ್ಟವಾಗಿದ್ದ ಕಾರಣ ಇಲ್ಲಿ ಅವಕಾಶ ಪಡೆದುಕೊಂಡೆ. ಪುಷ್ಪ ( Pushpa) ಸಿನಿಮಾವು ನಾನು ಬಾಲಿವುಡ್ (Bollywood) ಸಿನಿಮಾಗಳನ್ನು ಒಪ್ಪಿಕೊಳ್ಳಲು ಹೆಚ್ಚಿನ ಧೈರ್ಯ, ಸ್ಫೂರ್ತಿ ನೀಡಿತು. ಪುಷ್ಪ ಸಿನಿಮಾಕ್ಕೆ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆಯ ಫಲವೇ ಬಾಲಿವುಡ್‌ನಲ್ಲೂ ನನ್ನ ಪ್ರತಿಭೆ ಅನಾವರಣಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಅಂದಹಾಗೇ, ‘ಗುಡ್ ಬೈ’ ಚಿತ್ರ ಅಕ್ಟೋಬರ್ 7ರಂದು ಬಿಡುಗಡೆಗೊಳ್ಳಲಿದೆ. ವಿಕಾಸ್ ಬಹ್ ನಿರ್ದೇಶನದ ‘ಗುಡ್ ಬೈ’ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ನೀನಾ ಗುಪ್ತಾ, ಪಾವೈಲ್ ಗುಲಾಟಿ, ಸುನಿಲ್ ಮುಂತಾದವರು ಇದ್ದಾರೆ.

You may also like

Leave a Comment