Home » BREAKING NEWS : ರಾಜ್ಯದ ಹಲವೆಡೆ ʻವಿಧ್ವಂಸಕ ಕೃತ್ಯಕ್ಕೆʼ ಷಡ್ಯಂತ್ರ : ಶಿವಮೊಗ್ಗದಲ್ಲಿ ಶಂಕಿತ ಉಗ್ರ ಯಾಸಿನ್ ಅರೆಸ್ಟ್‌ |

BREAKING NEWS : ರಾಜ್ಯದ ಹಲವೆಡೆ ʻವಿಧ್ವಂಸಕ ಕೃತ್ಯಕ್ಕೆʼ ಷಡ್ಯಂತ್ರ : ಶಿವಮೊಗ್ಗದಲ್ಲಿ ಶಂಕಿತ ಉಗ್ರ ಯಾಸಿನ್ ಅರೆಸ್ಟ್‌ |

0 comments

ಇಡೀ ದೇಶವೇ ಬೆಚ್ಚಿಬೀಳಿಸುವಂತಹ ಸುದ್ದಿಯಾಗಿದೆ. ಮಲೆನಾಡಿದ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಶಂಕಿತ ಉಗ್ರ ಯಾಸಿನ್ ಅರೆಸ್ಟ್‌ ಮಾಡಲಾಗಿದೆ. ಒಟ್ಟು ಮೂವರ ಮೇಲೆ ಎಫ್‌ ಐಆರ್‌ ದಾಖಲಿಸಲಾಗಿದೆ.

ಶಿವಮೊಗ್ಗದಲ್ಲಿ ಕೂತು ರಾಜ್ಯದ ಹಲವೆಡೆ ಬಾಂಬ್‌ ಬ್ಲಾಸ್ಟ್‌ ಹಾಗೂ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಐಸಿಎಸ್‌ ( ICS) ಉಗ್ರರ ಜತೆಗೆ ಮಂಗಳೂರು-ಶಿವಮೊಗ್ಗ ಲಿಂಕ್‌ ಕೂಡ ಹೊಂದಿದ ಒಟ್ಟು ಮೂವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ರಾಜ್ಯದ ಹಲವು ಕಡೆ ಬಾಂಬ್‌ ಬ್ಲಾಸ್ಟ್‌ ಮಾಡೋದಕ್ಕೆ ಪ್ಲ್ಯಾನ್‌ ಮಾಡ್ತಿದ್ದರು. ಮೂವರು ಶಂಕಿತ ಎ1 ಆರೋಪಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶಾರಿಖ್‌, ಎ-2 ಮಂಗಳೂರು ಮೂಲದ ಮಾಸ್‌, ಎಲೆಕ್ಟ್ರಿಕ್‌ ಇಂಜಿನಿಯರ್‌ ಆಗಿದ್ದು, ಜೊತೆಗೆ ಶಿವಮೊಗ್ಗ ಸಿದ್ದೇಶ್ವರ ನಗರದ ಎ-3 ಆರೋಪಿ ಯಾಸಿನ್‌ ಎಂದು ಗುರುತಿಸಲಾಗಿದೆ.

ಯಾಸಿನ್‌ ಐಸಿಎಸ್‌ ಉಗ್ರ ನೇರ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಶರೀಖ್‌ ಮತ್ತು ಮಾಸ್‌ ಎಂಬ ಶಂಕಿತ ಉಗ್ರರಿಬ್ಬರಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

You may also like

Leave a Comment