Home » Auto Rate Revision : ಅ.1 ರಿಂದ ಆಟೋ ಪರಿಷ್ಕೃತ ದರ ಜಾರಿ

Auto Rate Revision : ಅ.1 ರಿಂದ ಆಟೋ ಪರಿಷ್ಕೃತ ದರ ಜಾರಿ

0 comments

ಉಡುಪಿಯಲ್ಲಿ ಆಟೋ ದರ ಪರಿಷ್ಕರಣೆ ಆಗಲಿದೆ. ಈ ಬಗ್ಗೆ ಪ್ರಕಟಣೆ ಕೂಡಾ ಬಂದಾಗಿದೆ. ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರವು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಜಿಲ್ಲೆಯಾದ್ಯಂತ ಸಂಚರಿಸುವ ಆಟೋರಿಕ್ಷಾಗಳ ಪ್ರಯಾಣ ದರವನ್ನು ಪರಿಷ್ಕರಣೆ
ಮಾಡಿದೆ. ಅಕ್ಟೋಬರ್ 1ರಿಂದ ಪರಿಷ್ಕರಣೆಯಾಗುವ
ಆಟೋ ದರದ ಪ್ರಕಾರ 1.5 ಕಿಲೊ ಮೀಟರ್‌ವರೆಗಿನ ಕನಿಷ್ಟ ದರ ನಲವತ್ತು ರೂಪಾಯಿ ಆಗಿದೆ. ಹಾಗೂ ಇದಾದ ಬಳಿಕ ಪ್ರತಿ ಕಿಲೋಮೀಟರ್‌ಗೆ 20 ರೂಪಾಯಿ ಆಟೋ ದರ ಇರಲಿದೆ.

ಉಡುಪಿ ಜಿಲ್ಲೆಯ ಎಲ್ಲಾ ಆಟೋ ರಿಕ್ಷಾ ಚಾಲಕರು ತಮ್ಮ ಆಟೋಗಳಿಗೆ ಕಾನೂನಿನ ಪ್ರಕಾರ ಫ್ಲಾಗ್ ಮೀಟರ್‌ನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರಲಿದೆ. ಇದರ ಜೊತೆಯಲ್ಲಿ ಸೆಪ್ಟೆಂಬರ್ 31ರ ಒಳಗಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ರಿಕ್ಯಾಲೀಬರೇಷನ್ ಹಾಗೂ ಸೀಲ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರಲಿದೆ. ಕಾನೂನಿನ ಈ ನಿಯಮಗಳನ್ನು ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಆರ್‌ಟಿಒ ಅಧಿಕಾರಿಗಳು ನೀಡಿದ್ದಾರೆ.

You may also like

Leave a Comment