Home » ಕೆನರಾ ತೆಕ್ಕೆಗೆ ವಿಕಾಸ್ ಶಿಕ್ಷಣ ಸಂಸ್ಥೆ

ಕೆನರಾ ತೆಕ್ಕೆಗೆ ವಿಕಾಸ್ ಶಿಕ್ಷಣ ಸಂಸ್ಥೆ

0 comments

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೆನರಾ ಸಮೂಹ ಶಿಕ್ಷಣ ಸಂಸ್ಥೆ, ಇದೀಗ ಮಂಗಳೂರಿನ ಮೇರಿಹಿಲ್‌ನಲ್ಲಿರುವ ವಿಕಾಸ್ ಶಿಕ್ಷಣ ಸಂಸ್ಥೆಯನ್ನು ಖರೀದಿಸಿದೆ.

ಮಾಜಿ ಸಚಿವ, ಉದ್ಯಮಿ ಕೃಷ್ಣ ಪಾಲೆಮಾರ್ ನೇತೃತ್ವದ ವಿಕಾಸ್ ಶಿಕ್ಷಣ ಸಂಸ್ಥೆಯನ್ನು ಕೆನರಾ ಶಿಕ್ಷಣ ಸಂಸ್ಥೆ 82 ಕೋಟಿ ರೂಗಳಿಗೆ ಖರೀದಿಸಿದೆ. ಖರೀದಿ ಒಪ್ಪಂದದ ವೇಳೆ ಸುಮಾರು 5 ಕೋಟಿ ರೂ ಸ್ಟ್ಯಾಂಪ್ ಮೊತ್ತವನ್ನು ಪಾವತಿಸಲಾಗಿದೆ. ಅಂದಾಜು 3.80 ಎಕರೆ ಪ್ರದೇಶದಲ್ಲಿರುವ ವಿಕಾಸ್ ಕಾಲೇಜ್ ಕಟ್ಟಡ ಮತ್ತು ಹಾಸ್ಟೆಲ್ 1 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ಎರಡು ಟ್ರಸ್ಟ್‌ಗಳ ನಡುವಿನ ಖರೀದಿ ಮತ್ತು ಮಾರಾಟ ವ್ಯವಹಾರವಾಗಿದೆ.

ವಿಕಾಸ್ ಎಜುಕೇಶನ್ ಟ್ರಸ್ಟ್ ಅಧೀನದಲ್ಲಿರುವ ವಿಕಾಸ್ ಕಾಲೇಜನ್ನು ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಮಂಡಳಿ ಖರೀದಿಸಿರುವುದನ್ನು ಅಧಿಕೃತ ಮೂಲಗಳು ಒಪ್ಪಿಕೊಂಡಿವೆ.

You may also like

Leave a Comment