Home » ನಾಡಗೀತೆ ಹಾಡುವ ಅವಧಿ 2 ನಿಮಿಷ 30 ಸೆಕೆಂಡ್ ಗೆ ನಿಗದಿಗೊಳಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ನಾಡಗೀತೆ ಹಾಡುವ ಅವಧಿ 2 ನಿಮಿಷ 30 ಸೆಕೆಂಡ್ ಗೆ ನಿಗದಿಗೊಳಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

0 comments

ಬೆಂಗಳೂರು : ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜೈ ಭಾರತ ಜನನಿಯ ತನುಜಾತೆ..ಗೆ ಮೈಸೂರು ಅನಂತಸ್ವಾಮಿ ಸ್ವರ ಸಂಯೋಜನೆಯ ಧಾಟಿ ಹಾಗೂ ಗಾಯನಕ್ಕೆ 2.30 ನಿಮಿಷ ಕಾಲಮಿತಿ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ನಾಡಗೀತೆಯನ್ನು ಹಾಡಲು ಶ್ರೀ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ನಾಡಗೀತೆಯ ಪೂರ್ಣಪಾಠವನ್ನು ಬಳಸಬೇಕು ಹಾಗೂ ಯಾವುದೇ ಆಲಾಪ ಮತ್ತು ಪುನರಾವರ್ತನೇ ಇಲ್ಲದೇ ಎರಡು ನಿಮಿಷ ಮೂವತ್ತು ಸೆಕೆಂಡುಗಳಲ್ಲಿ ಹಾಡಲು ಆದೇಶಿಸಿದೆ.

ಕೆಲವು ಕಾರ್ಯಕ್ರಮಗಳಲ್ಲಿ 7 -8 ನಿಮಿಷ ನಾಡಗೀತೆ ಹಾಡುತ್ತಿದ್ದು, ಇದರಿಂದ ಅಶಕ್ತರು ಮತ್ತು ವಿಕಲಚೇತನರಿಗೆ ಅನಾನುಕೂಲವಾಗಿತ್ತು. ಹೀಗಾಗಿ
ಧಾಟಿ ಹಾಗೂ ಕಾಲಮಿತಿಯ ಬಗ್ಗೆ ಸ್ಪಷ್ಟತೆ ತರಬೇಕೆಂಬ
ಒತ್ತಾಯ ಬಂದಿತ್ತು.

ಸಾಹಿತಿಗಳು ಹಾಗೂ ಸುಗಮ ಸಂಗೀತ ಕ್ಷೇತ್ರದ ಕಲಾವಿದರನ್ನೊಳಗೊಂಡಂತೆ , ಪ್ರಸಿದ್ದ ಗಾಯಕಿ ವಿದ್ವಾನ್ ಶ್ರೀಮತಿ ಹೆಚ್ ಆರ್ ಲೀಲಾವತಿ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಇದರಲ್ಲಿ ಬಂದ ವರದಿಯ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ.

You may also like

Leave a Comment