Home » ಪಿ.ಎಫ್.ಐ ಕಚೇರಿಗಳ ದಾಳಿ ಬೆನ್ನಲ್ಲೇ ಮತ್ತೊಂದು ಹತ್ಯೆಗೆ ಸಂಚು!? ಆರ್.ಎಸ್.ಎಸ್ ಮುಖಂಡನ ಕಾರಿನಲ್ಲಿ ಬೆದರಿಕೆಯ ಬರಹ-ಸ್ಥಳಕ್ಕೆ ಪೊಲೀಸರ ಭೇಟಿ!!

ಪಿ.ಎಫ್.ಐ ಕಚೇರಿಗಳ ದಾಳಿ ಬೆನ್ನಲ್ಲೇ ಮತ್ತೊಂದು ಹತ್ಯೆಗೆ ಸಂಚು!? ಆರ್.ಎಸ್.ಎಸ್ ಮುಖಂಡನ ಕಾರಿನಲ್ಲಿ ಬೆದರಿಕೆಯ ಬರಹ-ಸ್ಥಳಕ್ಕೆ ಪೊಲೀಸರ ಭೇಟಿ!!

0 comments

ಚಿಕ್ಕಮಗಳೂರು: ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸರಣಿ ಕೊಲೆಗಳು ನಡೆದು, ತನಿಖೆಯ ಬಳಿಕ ಅತೀ ಹೆಚ್ಚು ಮುನ್ನಲೆಗೆ ಬಂದಿದ್ದ ಎಸ್.ಡಿ.ಪಿ.ಐ.-ಪಿ.ಎಫ್.ಐ ಕಚೇರಿಗಳ ಮೇಲೆ ಎನ್.ಐ.ಎ ದಾಳಿ ನಡೆಸಿದ್ದು ಇದರ ಬೆನ್ನಲ್ಲೇ ಮತ್ತೊಂದು ಹತ್ಯೆಗೆ ಸಂಚು ರೂಪುಗೊಂಡಿದೆ ಎನ್ನಲಾಗಿದೆ.

ಹತ್ಯೆ ಕೃತ್ಯ ಎಸಗಿದ ಮತಾಂಧರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದರೂ ಮತ್ತೊಮ್ಮೆ ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುವ ಹುನ್ನಾರವೊಂದು ನಡೆದಿದ್ದು, ಇದರ ಭಾಗವಾಗಿ ಆರ್.ಎಸ್.ಎಸ್ ನಾಯಕರೊಬ್ಬರ ಕಾರಿನ ಮೇಲೆ ‘ಕಿಲ್ ಯೂ ಜಿಹಾದ್’ ಎಂದು ಬರೆದು ಕಾರಿನ ಚಕ್ರದ ಗಾಳಿ ತೆಗೆದ ದುಷ್ಕರ್ಮಿಗಳ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಹಾಸನ ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಇಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು, ಸದಾ ಹಿಂದೂ ಸಮಾಜಕ್ಕಾಕಾಗಿ ಕೆಲಸ ಮಾಡುವ ಆರ್.ಎಸ್.ಎಸ್ ಮುಖಂಡ ಡಾ. ಶಶಿಧರ್ ಚಿಂದಿಗೆರೆ ಜಯಣ್ಣ ಅವರ ಕಾರಿನ ಮೇಲೆ ಇಂತಹ ಬರಹವೊಂದು ಕಂಡುಬಂದಿದ್ದು, ಕೊಲೆ ಬೆದರಿಕೆಯ ಬರಹಗಳನ್ನು ಬರೆದು ಕಾರನ್ನು ಸ್ಕ್ರಾಚ್ ಮಾಡಿ ಹಾನಿಮಾಡಲಾಗಿದೆ ಎಂದು ದೂರಲಾಗಿದೆ.

ದಿನೇ ದಿನೇ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಇಂತಹ ಕೃತ್ಯಗಳು ನಡೆಯುತ್ತಿದ್ದು, ಹಿಂದೂ ಯುವಕರ ಕೊಲೆ ನಡೆಯುವ ಮುನ್ನ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ. ಈ ಸಂಬಂಧ ಕಡೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

You may also like

Leave a Comment