Home » Ration and DA hike : ಉಚಿತ ಪಡಿತರ ಅವಧಿ ವಿಸ್ತರಣೆ | ಕೇಂದ್ರ ಸರಕಾರಿ ನೌಕರರ DA ಹೆಚ್ಚಳ – ಕೇಂದ್ರದಿಂದ ಗ್ರೀನ್ ಸಿಗ್ನಲ್

Ration and DA hike : ಉಚಿತ ಪಡಿತರ ಅವಧಿ ವಿಸ್ತರಣೆ | ಕೇಂದ್ರ ಸರಕಾರಿ ನೌಕರರ DA ಹೆಚ್ಚಳ – ಕೇಂದ್ರದಿಂದ ಗ್ರೀನ್ ಸಿಗ್ನಲ್

by Mallika
2 comments

ಕೇಂದ್ರ ಸರಕಾರ ದೇಶದ ಬಡ ಜನರಿಗೆ ಗುಡ್ ನ್ಯೂಸ್ ನೀಡಿದೆ. ಉಚಿತ ಪಡಿತರ ನೀಡುವ ಯೋಜನೆಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ‌. ನಿಜಕ್ಕೂ ಇದು ದೇಶದ ಬಡ ಜನರಿಗೆ ನಿಜಕ್ಕೂ ಹೆಚ್ಚಿನ ಖುಷಿ ನೀಡುತ್ತದೆ. ಸರಕಾರದ ಈ ಯೋಜನೆ ಸೆಪ್ಟೆಂಬರ್ 30 ರಂದು ಕೊನೆಗೊಳ್ಳಬೇಕಿತ್ತು. ಅದರೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಈ ಯೋಜನೆಯನ್ನು ಮೂರು ತಿಂಗಳವರೆಗೆ ಅಂದರೆ ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಸರ್ಕಾರವು ಕೇಂದ್ರ ನೌಕರರಿಗೆ ದೊಡ್ಡ ಉಡುಗೊರೆಯನ್ನು ಸಹ ನೀಡಿದೆ. ಕೇಂದ್ರ ನೌಕರರ ಡಿಎಯನ್ನು ಸಹ ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ.

ಹಣಕಾಸು ಸಚಿವಾಲಯದ ಪ್ರಕಾರ, ಉಚಿತ ಪಡಿತರದ ಯೋಜನೆಯನ್ನು ಮೂರು ತಿಂಗಳವರೆಗೆ ವಿಸ್ತರಿಸುವುದರಿಂದ ಬೊಕ್ಕಸಕ್ಕೆ 45,000 ಕೋಟಿ ರೂ. ತನ್ನ ಬಳಿ ಠೇವಣಿ ಇರಿಸಲಾದ ಆಹಾರ ಧಾನ್ಯಗಳ ದಾಸ್ತಾನನ್ನು ಪರಿಶೀಲಿಸಿದ ನಂತರ ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಪ್ರಸ್ತುತ, ಆಹಾರ ಧಾನ್ಯಗಳು ಸರ್ಕಾರದ ಬಳಿ ದೊಡ್ಡ ಪ್ರಮಾಣದಲ್ಲಿ ಲಭ್ಯವಿದೆ. ಈ ಹಿಂದೆ, ಬಹುಶಃ ಉಚಿತ ಪಡಿತರ ಯೋಜನೆಯನ್ನು ಈಗ ನಿಲ್ಲಿಸಲಾಗುವುದು ಎಂಬ ಚರ್ಚೆಗಳು ನಡೆದಿದ್ದವು.

ಕರೋನಾ ಅವಧಿಯಲ್ಲಿ, ಈ ಯೋಜನೆಯನ್ನು ಕೇಂದ್ರ ಸರ್ಕಾರವು ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ ಹೆಸರಿನಲ್ಲಿ ಘೋಷಿಸಿತು. ಇದರ ಅಡಿಯಲ್ಲಿ, ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 5 ಕೆಜಿ ಉಚಿತ ಪಡಿತರವನ್ನು ನೀಡಲಾಗುತ್ತದೆ. ಮುಂದಿನ ಮೂರು ತಿಂಗಳಲ್ಲಿ ಗುಜರಾತ್ ಮತ್ತು ಹಿಮಾಚಲದಲ್ಲಿ ಚುನಾವಣೆಗಳು ನಡೆಯಲಿವೆ. ಅಂತಹ ಪರಿಸ್ಥಿತಿಯಲ್ಲಿ, ಯೋಜನೆಯನ್ನು ಮೂರು ತಿಂಗಳವರೆಗೆ ವಿಸ್ತರಿಸುವ ನಿರ್ಧಾರವನ್ನು ಸಹ ಅದರೊಂದಿಗೆ ಲಿಂಕ್ ಮಾಡಲಾಗುತ್ತಿದೆ.

You may also like

Leave a Comment