Home » ಹಿಜಾಬ್ ವಿರುದ್ಧ ಸ್ಕಾರ್ಫ್ ಕಿತ್ತೆಸೆದು ಬೆಂಬಲಿಸಿದ ಯುವತಿಯ ಹತ್ಯೆ

ಹಿಜಾಬ್ ವಿರುದ್ಧ ಸ್ಕಾರ್ಫ್ ಕಿತ್ತೆಸೆದು ಬೆಂಬಲಿಸಿದ ಯುವತಿಯ ಹತ್ಯೆ

by Praveen Chennavara
0 comments

ಇರಾನ್‌ನಲ್ಲಿ ಹಿಜಾಬ್‌ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ತಲೆಗೆ ಧರಿಸಿದ್ದ ಸ್ಕಾರ್ಫ್ ಕಿತ್ತೆಸೆದು ಬೆಂಬಲ ವ್ಯಕ್ತಪಡಿಸಿದ್ದ ಹದೀಸ್‌ ನದಾಫಿ ಎಂಬ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕೆಲದಿನಗಳ ಹಿಂದೆ ಹಿಜಾಬ್‌ ಸರಿಯಾಗಿ ಧರಿಸದ ಕಾರಣಕ್ಕೆ ಮೆಹ್ಸಾ ಅಮಿನಿ ಎಂಬ ಯುವತಿಯನ್ನು ಇರಾನ್‌ ಪೊಲೀಸರು ಬಂಧಿಸಿದ್ದರು.ಪೊಲೀಸರ ವಶದಲ್ಲಿ ಆಕೆ ಮೃತಪಟ್ಟಿದ್ದಳು.

ಪೊಲೀಸರ ಈ ನೈತಿಕಗಿರಿ ಖಂಡಿಸಿ ಇರಾನ್‌, ಸಿರಿಯಾ, ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೇ ರೀತಿ ಟೆಹರಾನ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಸ್ಕಾರ್ಫ್ ಕಿತ್ತೆಸೆದ ಹದೀಸ್‌ ನದಾಫಿ ಪೋಟೋ ಎಲ್ಲೆಡೆ ವೈರಲ್‌ ಆಗಿತ್ತು.

ದುಷ್ಕರ್ಮಿಗಳು ಮಂಗಳವಾರ ಹದೀಸ್‌ ಮೇಲೆ ಆರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

You may also like

Leave a Comment