Home » ಈಗಲೂ ನಾನು ನನ್ನ ಎಕ್ಸ್ ಗಳ ಜೊತೆ ಫ್ರೆಂಡ್ ಶಿಪ್ ಇಟ್ಕೊಂಡಿದ್ದೀನಿ – ರಶ್ಮಿಕಾ ಮಂದಣ್ಣ

ಈಗಲೂ ನಾನು ನನ್ನ ಎಕ್ಸ್ ಗಳ ಜೊತೆ ಫ್ರೆಂಡ್ ಶಿಪ್ ಇಟ್ಕೊಂಡಿದ್ದೀನಿ – ರಶ್ಮಿಕಾ ಮಂದಣ್ಣ

by Mallika
0 comments

ರಶ್ಮಿಕಾ ಮಂದಣ್ಣ (Rashmika Mandanna) ಬಹಳ ಬಿಜಿ ನಟಿಯೆಂದರೆ ತಪ್ಪಾಗಲಾರದು. ತೆಲುಗು, ತಮಿಳು, ಬಾಲಿವುಡ್‌ನಲ್ಲಿ ಬ್ಯುಸಿ ಇರುವ ನಟಿ.

ಬಾಲಿವುಡ್ ನಲ್ಲಿ ಬಹಳ ಬಿಜಿಯಾಗಿರುವ ನಟಿಯ ಮೊದಲನೇ ಹಿಂದಿ ಸಿನಿಮಾ ‘ಗುಡ್‌ಬೈ’ ರಿಲೀಸ್‌ಗೆ ರೆಡಿ ಇದೆ. ಹಾಗಾಗಿ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಈ ಸಿನಿಮಾಗೆ ರಶ್ಮಿಕಾ ಭರ್ಜರಿಯಾಗೇ ಪ್ರಚಾರ ನೀಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ನಾನಾ ನಗರಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೊಡಗಿನ ಕುವರಿಗೆ ಮಾಧ್ಯಮದವರಿಂದ ವೈಯಕ್ತಿಕ ಪ್ರಶ್ನೆಗಳು ಕೂಡ ಬಂದಿದೆ. ಇದಕ್ಕೆ ರಶ್ಮಿಕಾ ಯಾವುದೇ ಹಿಂಜರಿಕೆ ಇಲ್ಲದೆ ಉತ್ತರಿಸಿದ್ದಾರೆ.

ಅವರ ಉತ್ತರ ಕೇಳಿ ಫ್ಯಾನ್ಸ್ ನಿಜಕ್ಕೂ ಆಶ್ಚರ್ಯಗೊಂಡಿದ್ದಾರೆ.

ಎಕ್ಸ್‌ಗಳ ವಿಚಾರವಾಗಿ ರಶ್ಮಿಕಾಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿದ ಅವರು, ‘ನನ್ನ ಎಕ್ಸ್‌ಗಳ ಜತೆ ಈಗಲೂ ಫ್ರೆಂಡ್‌ಶಿಪ್ ಉಳಿಸಿಕೊಂಡಿದ್ದೇನೆ.

ಅವರ ಕುಟುಂಬವನ್ನು, ಅವರ ಪಾಲಕರನ್ನು ಭೇಟಿ ಮಾಡುತ್ತೇನೆ. ನನಗೆ ಗೊತ್ತು ಅದು ಒಳ್ಳೆಯ ಲಕ್ಷಣ ಅಲ್ಲ ಎಂದು. ಆದರೆ, ನನಗೆ ಅವರ ಜೊತೆ ಒಳ್ಳೆಯ ಫ್ರೆಂಡ್‌ಶಿಪ್ ಇದೆ. ಅದು ಒಳ್ಳೆಯದು’ ಎಂದು ರಶ್ಮಿಕಾ ಹೇಳಿದ್ದಾರೆ.

You may also like

Leave a Comment