ಇಂದು ಇಡೀ ಸಿನಿಮಾ ಜಗತ್ತೇ ಎಲ್ಲರನ್ನು ಕನ್ನಡ ಸಿನಿಮಾರಂಗದತ್ತ ನೋಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳನ್ನು ತೆಗಳುವ ಮಂದಿ ಈಗ ಸೈಲೆಂಟ್ ಆಗಿದ್ದಾರೆ. ಇದೀಗ ಎಲ್ಲೆಡೆ ಹವಾ ಎಬ್ಬಿಸಿದ ‘ಕಾಂತಾರ’ ಸಿನಿಮಾ ನಿಜಕ್ಕೂ ಎಲ್ಲಾ ಸಿನಿ ರಸಿಕರ ಮನಸ್ಸನ್ನು ಗೆದ್ದಿದೆ ಎಂದೇ ಹೇಳಬಹುದು.
ಅಂದ ಹಾಗೇ, ಕಾಂತಾರ ಸಿನಿಮಾಬಾಕ್ಸ್ ಆಫೀಸ್ ಗಳಿಕೆಯಲ್ಲೂ ಹೊಸ ದಾಖಲೆ ಬರೆದಿದೆ. ‘ಕಾಂತಾರ’ ಜಗತ್ತಿನಾದ್ಯಂತ ಸುಮಾರು 130 ಕೋಟಿ (Kantara Box Office) ಗಳಿಸಿದೆ ಎನ್ನಲಾಗಿದೆ.
ಕಾಂತಾರ ಸೆಪ್ಟೆಂಬರ್ 30ರ ಶುಕ್ರವಾರ ರಿಲೀಸ್ ಆಗಿತ್ತು. 4 ದಿನದಲ್ಲಿ ಈ ಸಿನಿಮಾದ ಅಬ್ಬರ ಜಗತ್ತಿನ ಮೂಲೆ ಮೂಲೆಗೂ ಆವರಿಸಿದೆ. ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದರಲ್ಲಿ ದಾಪುಗಾಲು ಇಟ್ಟಿದೆ ಈ ಕಾಂತಾರ. ಈವರೆಗೂ 130 ಕೋಟಿ ಗಳಿಸಿರಬಹುದು ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ತಜ್ಞರು. ಇಷ್ಟು ಗಳಿಕೆ ರಿಷಬ್ ಶೆಟ್ಟಿ ಅವರ ವೃತ್ತಿ ಜೀವನದಲ್ಲೇ ಹೊಸ ರೆಕಾರ್ಡ್ ಎಂದೇ ಹೇಳಬಹುದು.
ರಿಷಬ್ ಶೆಟ್ಟಿ ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕಾಂತಾರ ಚಿತ್ರ ಆರಂಭದಲ್ಲಿ ಸುಮಾರು 250ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆ ಬಳಿಕ ‘ಕಾಂತಾರ’ ಹವಾ ಹೇಗಿದೆ ಎಂದರೆ, ಥಿಯೇಟರ್‌ಗಳ ಸಂಖ್ಯೆ 2-3 ಪಟ್ಟು ಹೆಚ್ಚಾಗಿ ಹೊಸ ಹವಾ ಸೃಷ್ಟಿಸಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ. ಭಾರತ ಮಾತ್ರವಲ್ಲ ಯುಎಸ್, ಯುಕೆ, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲೂ ‘ಕಾಂತಾರ’ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಕನ್ನಡ ಚಿತ್ರರಂಗದ ದಿಗ್ಗಜರೆಲ್ಲರೂ ಈ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಜನೀಶ್ ಬಿ. ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣ ನಿಜಕ್ಕೂ ಯಾರೂ ಮನಸೋಲದವರೇ ಇಲ್ಲ. ನಟಿ ಸಪ್ತಮಿ ಗೌಡಗೆ ಅವರಿಗೆ ಈ ಸಿನಿಮಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆಯಲು ಉತ್ತಮ ಆರಂಭ ನೀಡಿದೆ. ನಟ ಕಿಶೋರ್ ಮತ್ತು ಹಿರಿಯ ನಟ ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳನ್ನು ನಿಭಾಯಿಸುವ ಮೂಲಕ ಚಿತ್ರಕ್ಕೆ ಗಟ್ಟಿತನ ನೀಡಿದ್ದಾರೆ ಎಂದರೆ ತಪ್ಪಾಗಲಾರದು.
