Home » ಈದ್ ಮೀಲಾದ್ ಹಬ್ಬದ ಹಿನ್ನೆಲೆ : ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ

ಈದ್ ಮೀಲಾದ್ ಹಬ್ಬದ ಹಿನ್ನೆಲೆ : ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ

by Praveen Chennavara
0 comments

ಬೆಳ್ಳಾರೆ : ಈದ್ ಮೀಲಾದ್ ಹಬ್ಬದ ಹಿನ್ನೆಲೆ ಬೆಳ್ಳಾರೆ ಪೋಲಿಸ್ ಠಾಣಾ ವತಿಯಿಂದ ಶಾಂತಿಸಭೆಯು ಶುಕ್ರವಾರ ದಂದು ನಡೆಯಿತು.

ಬೆಳ್ಳಾರೆ ಪೋಲಿಸ್ ಠಾಣೆಯ ಠಾಣಾಧಿಕಾರಿ ಸುಹಾಸ್ ರವರ ನೇತೃತ್ವದಲ್ಲಿ ಸಭೆ ನಡೆಯಿತು.

ಠಾಣಾಧಿಕಾರಿ ಸುಹಾಸ್ ಮಾತನಾಡಿ , ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ, ಹಬ್ಬ ಯಶಸ್ವಿಯಾಗಿ ನಡೆಯಲಿ ಎಂದರು.

ಹಬ್ಬದ ಸಂದರ್ಭದಲ್ಲಿ ಏನೇ ಅಹಿತಕರ ಘಟನೆಗೆ ಎಡೆಯಾದರೆ ತಕ್ಷಣ ಠಾಣೆಗೆ ಮಾಹಿತಿ ನೀಡಿ ಸಹಕರಿಸಿ ಎಂದರು.

ಸಭೆಯಲ್ಲಿ ಬೆಳ್ಳಾರೆ ಠಾಣಾ ವ್ಯಾಪ್ತಿಗೆ ಒಳಪಟ್ಟ ಮಸೀದಿಯ ಪ್ರಮುಖರು ಉಪಸ್ಥಿತರಿದ್ದರು.

You may also like

Leave a Comment