Home » ‘ಇಸ್ಲಾಂಗೆ ಮತಾಂತವಾದರೆ ಮಾತ್ರ ಮದುವೆ ಆಗ್ತೀನಿ’ | ಪ್ರೀತಿಸಿದ ಮೇಲೆ ಅನಿವಾರ್ಯವಾಗಿ ಮತಾಂತರವಾದೆ – ನಟಿ ದಿವ್ಯಾ ಶ್ರೀಧರ್ ಬೆಚ್ಚಿ ಬೀಳಿಸೋ ಹೇಳಿಕೆ

‘ಇಸ್ಲಾಂಗೆ ಮತಾಂತವಾದರೆ ಮಾತ್ರ ಮದುವೆ ಆಗ್ತೀನಿ’ | ಪ್ರೀತಿಸಿದ ಮೇಲೆ ಅನಿವಾರ್ಯವಾಗಿ ಮತಾಂತರವಾದೆ – ನಟಿ ದಿವ್ಯಾ ಶ್ರೀಧರ್ ಬೆಚ್ಚಿ ಬೀಳಿಸೋ ಹೇಳಿಕೆ

0 comments

ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರು ತಾನಿಚ್ಛಿಸಿದ ಅಮ್ಜದ್ ಖಾನ್ ಜೊತೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡೇ ಮದುವೆ ಆಗಿರುತ್ತೇನೆ ಎಂಬ ಮಾಹಿತಿಯೊಂದನ್ನು ನೀಡಿದ್ದಾರೆ.

‘ನಾವು ಒಂದೇ ಧಾರವಾಹಿಯಲ್ಲಿ ನಟಿಸುತ್ತಿದ್ದಾಗ ಪರಿಚಯವಾಗಿದ್ದು, ಆಮೇಲೆ ಪರಸ್ಪರ ಪ್ರೀತಿ ಹುಟ್ಟಿತು ಎಂದು ದಿವ್ಯಾ ಹೇಳಿದ್ದಾರೆ.

ತಮಿಳು ಮಾಧ್ಯಮಗಳ ಜೊತೆ ಮಾತನಾಡಿರುವ ದಿವ್ಯಾ ಮುಂದೆ ಮಾತನಾಡಿ, ʼಅವರು ಮುಸ್ಲಿಂ ಎಂದು ಗೊತ್ತಿರಲಿಲ್ಲ. ಗೊತ್ತಾದ ಬಳಿಕ ಅಮ್ಜದ್ ಅನುಸರಿಸುವ ಧರ್ಮಕ್ಕೆ ನನ್ನನ್ನು ಮತಾಂತರ ಆಗು ಎಂದು ಕೋರಿದ್ದರು. ನನಗೆ ಅದು ಅನಿವಾರ್ಯವಾಯಿತುʼ ಎಂದು ದಿವ್ಯಾ ಹೇಳಿದ್ದಾರೆ.

ʼನಾನು ಇಷ್ಟಪಟ್ಟವನನ್ನು ಮದುವೆ ಆಗಲು ಇಸ್ಲಾಂ ಧರ್ಮಕ್ಕೆ ಮತಾಂತರವಾದೆ. ಆ ಬಳಿಕ ನನ್ನ ಸಲಹೆಯಂತೆ ನಮ್ಮ ಹಿಂದೂ ಧರ್ಮದ ಸಂಪ್ರದಾಯ ಪ್ರಕಾರ ಕಾಂಚಿಪುರಂನಲ್ಲಿರುವ ದೇವಾಲಯದಲ್ಲಿ ನಮ್ಮಿಬ್ಬರ ಸರಳ ಮದುವೆ ನೆರವೇರಿತುʼ ಎಂದು ದಿವ್ಯ ಹೇಳಿದ್ದಾರೆ.

ದಿವ್ಯಾ ಮತ್ತು ಅಮ್ಜದ್ ಸಂಸಾರದಲ್ಲಿ ದೊಡ್ಡ ಬಿರುಕು ಮೂಡಿದ್ದು, ಅವರ ದಾಂಪತ್ಯದ ಕೀಟಲೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಅಮ್ಜದ್ ವಿರುದ್ಧ ದಿವ್ಯಾ ಅನೇಕ ಆರೋಪಗಳನ್ನು ಮಾಡಿದ್ದಾರೆ. ʼನಾನು ಬಸುರಿ ಎಂದು ತಿಳಿಯುತ್ತಿದ್ದಂತೆಯೇ ಅಮ್ಜದ್ ಖಾನ್ ನನ್ನಿಂದ ದೂರ ಆಗುವುದಕ್ಕೆ ಶುರು ಮಾಡಿದರು.ಮಾತ್ರವಲ್ಲದೇ ಮಗುವನ್ನು ಗರ್ಭಪಾತ ಮಾಡಿಸು ಎಂದು ಒತ್ತಾಯಿಸುತ್ತಿದ್ದರುʼ ಎಂದಿದ್ದಾರೆ ದಿವ್ಯ.

ʼಇದೇ ಕಾರಣಕ್ಕಾಗಿ ತಮ್ಮಿಬ್ಬರ ನಡುವೆ ಕಲಹ ಉಂಟಾಗಿ , ಈ ಕಲಹ ಉತ್ತುಂಗಕ್ಕೇರಿ ದೈಹಿಕ ಹಲ್ಲೆಗೆ ಒಳಗಾದೆನುʼ ಎಂದು ದಿವ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.

You may also like

Leave a Comment